ಗದಗನಲ್ಲಿ ಎಸ್ಪಿ ಯತೀಶ್ ಎನ್ ಸಿಟಿ ರೌಂಡ್ಸ್

ಗದಗನಲ್ಲಿ ಎಸ್ಪಿ ಯತೀಶ್ ಎನ್ ಸಿಟಿ ರೌಂಡ್ಸ್

ಗದಗನಲ್ಲಿ ಎಸ್ಪಿ ಯತೀಶ್ ಎನ್ ಸಿಟಿ ರೌಂಡ್ಸ್

ಗದಗ: ಈಗಾಗಲೇ ಜೂನ್ 1 ರವರೆಗೆ ಗದಗ ಜಿಲ್ಲೆಯನ್ನು ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆ ಎಸ್ಪಿ ಯತೀಶ್ ಎನ್ ಬೆಳ್ಳಂಬೆಳಿಗ್ಗೆ ಫಿಲ್ಡಿಗಿಳಿದು ಅನವಶ್ಯಕ ಓಡಾಡುವವರಿಗೆ ಖಡಕ್ ವಾರ್ನಿಂಗ್ ಮಾಡಿದರು. ಗದಗ- ಬೆಟಗೇರಿ ಅವಳಿ ನಗರವನ್ನು ರೌಂಡ್ ಹಾಕಿದರು. ಹಳೇ ಡಿಸಿ ಆಫೀಸ್ ಸರ್ಕಲ್ ನಲ್ಲಿ ಸ್ವತ: ಅವರೇ ವಾಹನ ಪರಿಶೀಲನೆ ನಡೆಸಿದರು. ವಿನಾಕಾರಣ ರಸ್ತೆಗೆ ಇಳಿದ ವಾಹನ ಸೀಜ್ ಮಾಡಲು ಸೂಚಿಸಿದರು. ಈ ಮೂಲಕ ಅನವಶ್ಯಕ ಓಡಾಡುವವರ ವಾಹನ ಸೀಜ್ ಮಾಡುವ ಮೂಲಕ ಪೊಲೀಸರು ವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು. ಈಗಾಗಲೇ ಮೇ.27 ರಿಂದ ಜೂನ್ 1 ರವರೆಗೆ ಲಾಕ್ ಡೌನ್ ಘೋಷಣೆ ಮಾಡಿದಾಗಲೂ ಜನ್ರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದರು. ಹೀಗಾಗಿ ಅವಂತರ ಬೈಕ್ ಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದರು. ಏನೇ ಆಗಲಿ ಸರ್ಕಾರ ಅಥವಾ ಅಧಿಕಾರಿಗಳ ಪ್ರಯತ್ನಿದಿಂದ ಮಾತ್ರ ಕೊರೊನಾ ನಿಯಂತ್ರಣ ಅಸಾಧ್ಯ. ನಮ್ಮ ಆರೋಗ್ಯದ ಬಗ್ಗೆ ಪ್ರತಿಯೊಬ್ಬರಲ್ಲಿ ಕಾಳಜಿ ಮೂಡಬೇಕಿದೆ. ಹೀಗಾಗಿ ಜನರ ಸಹಕಾರ ಅತ್ಯಂತ ಅವಶ್ಯಕ ಎನ್ನುವುದು ಪೊಲೀಸ್ ಇಲಾಖೆ ಮನವಿ.

Exit mobile version