ಕೋಳಿಗೆ ಡಿಸೆಂಟ್ರಿಯಂತೆ..! ಕಾರಣ ಹೇಳಿ ಹೊರಬಂದ ವ್ಯಕ್ತಿಯ ಮಾತು ಕೇಳಿ..!

ಗದಗ: ಕೋಳಿಗೆ ಭೇದಿ, ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದೇನೆ. ಹೀಗಂತ ಕಾರಣ ನೀಡಿದ ವ್ಯಕ್ತಿ ಮಾತಿಗೆ ಪೊಲೀಸರೆ ಸುಸ್ತಾದರು. ಲಾಕ್ ಡೌನ್ ಹಿನ್ನೆಲೆ ಅನಾವಶ್ಯಕ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ಹೀಗಾಗಿ ಗದಗನಲ್ಲಿ ವ್ಯಕ್ತಿಯೊಬ್ಬ ಕೋಳಿ ನೆಪ ಹೇಳಿದ ಫನ್ನಿ ಘಟನೆ ನಡೆದಿದೆ. ನಗರದ ಟಾಂಗಾ ಕೂಟ್ ಬಳಿ ವ್ಯಕ್ತಿಯೊಬ್ಬನನ್ನ ತಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಆ ವ್ಯಕ್ತಿ ಚೀಲದಲ್ಲಿರೋ ಕೋಳಿ ಹೊರತೆಗೆದು, ಕೋಳಿಗೆ ಬೇಧಿ ಶುರುವಾಗಿದೆ. ಡಾಕ್ಟರ್ ಹತ್ರಾ ತೋರಿಸೋಕೆ ಹೋಗ್ತಿದ್ದೀನಿ ಎನ್ನುವ ಕಾರಣ ಕೇಳಿ ಪೊಲೀಸರು ಬಿದ್ದು ಬಿದ್ದು ನಕ್ಕರು. ಪೊಲೀಸರು ಕೆಲ ಹೊತ್ತು ವಿಚಾರಣೆ ನಡೆಸಿ ನಂತರ ಕೋಳಿ ನೆಪ ಹೇಳಿದ ವ್ಯಕ್ತಿಯನ್ನು ಮನೆಗೆ ಪಾಪಾಸ್ ಕಳುಹಿಸಿದರು.

Exit mobile version