ಒಂದು ತಿಂಗಳಿನಿಂದ ಕೊರೊನಾ ಚಿಕಿತ್ಸೆ : 6 ಬಾರಿಯ ಟೆಸ್ಟ್ ನಲ್ಲಿಯೂ ವರದಿ ಪಾಸಿಟಿವ್!

ಮಂಗಳೂರು: ಇಲ್ಲೊಬ್ಬ ವ್ಯಕ್ತಿ ಕೊರೊನಾ ಸೋಂಕು ತಗುಲಿ ತಿಂಗಳಾದರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಬರೋಬ್ಬರಿ 6 ಬಾರಿ ಪರೀಕ್ಷೆ ನಡೆಸಿದರೂ ವರದಿ ಪಾಸಿಟಿವ್ ಬರುತ್ತಿದೆ.

ಹೀಗಾಗಿ ಇದೊಂದು ಕೇಸ್ ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಈ ವ್ಯಕ್ತಿ ಮೇ. 12ರ ರಾತ್ರಿ ಲಾಕ್‌ಡೌನ್‌ ಬಳಿಕ ಆರಂಭಗೊಂಡ ಪ್ರಥಮ ಅಂತಾರಾಷ್ಟ್ರೀಯ ವಿಮಾನದಲ್ಲಿ ದುಬೈನಿಂದ ಮಂಗಳೂರಿಗೆ 81 ವರ್ಷದ ವ್ಯಕ್ತಿಯೊಬ್ಬರು ಆಗಮಿಸಿದ್ದರು. ಅವರೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಪತ್ನಿ, ಮಗಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಆದರೆ, ಆ ಹಿರಿಯ ವ್ಯಕ್ತಿ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಬಿಡದೆ ಅವರ ತಪಾಸಣೆ ನಡೆಯುತ್ತಿದೆ. ಆದರೆ, ಅವರು ಮಾತ್ರ ಗುಣ ಹೊಂದುತ್ತಿಲ್ಲ. ಆದರೆ, ಕೊಠಡಿಯಲ್ಲಿಯೇ ಆರಾಮವಾಗಿಯೇ ತಿರುಗಾಡುತ್ತಿದ್ದಾರೆ. ಆದರೆ, ತಪಾಸಣೆಯ ವರದಿ ಮಾತ್ರ ನೆಗೆಟಿವ್ ಬರುತ್ತಿಲ್ಲ. ಹೀಗಾಗಿ ವೈದ್ಯರಿಗೆ ಇದೊಂದು ಕೇಸ್ ತಲೆನೋವಾಗಿ ಪರಿಣಮಿಸಿದೆ.

ಒಂದು ತಿಂಗಳಿಂದ ಆಸ್ಪತ್ರೆಯಲ್ಲಿರುವ ಕಾರಣ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ. ಪ್ರತಿ ದಿನ ಮನೆಗೆ, ಸಂಬಂಧಿಕರಿಗೆ ಕರೆ ಮಾಡಿ, ನಾನು ಆರೋಗ್ಯವಂತನಾಗಿದ್ದೇನೆ. ನನಗೆ ಆಹಾರ ತಂದು ಕೊಡದಿದ್ದರೂ ಪರವಾಗಿಲ್ಲ. ಒಮ್ಮೆ ನನ್ನನ್ನು ಈ ಜೈಲಿನಿಂದ ಮನೆಗೆ ಕರೆದುಕೊಂಡು ಹೋಗಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲೇ ಇದ್ದು, ಮಾನಸಿಕ ನೋವಿಗೆ ಒಳಗಾಗಿದ್ದಾರೆ. ಹೀಗಾಗಿ ಅವರಿಗೆ ಹೊಸದಾಗಿ ಯೂರಿಕ್‌ ಆ್ಯಸಿಡ್‌ ಕಾಯಿಲೆ ತಗುಲಿದೆ ಎಂದು ವೈದ್ಯರು ಹೇಳಿದ್ದಾರೆ.

Exit mobile version