ರೈಲ್ವೇ ರೇಕ್ ಗಳಲ್ಲಿನ ರಸಗೊಬ್ಬರ ಚೀಲಗಳನ್ನು ಅನ್ಲೋಡ್ ಸಮಯ ವಿಸ್ತರಿಸಿದ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಕೃಷಿ ಚಟುವಟಿಕೆಗಳು ಲಾಕ್ಡೌನ್ ನಿಂದ ವಿನಾಯಿತಿ ನೀಡಿದ್ದರಿಂದ ಚುರುಕುಗೊಂಡಿವೆ. ರೈತರಿಗೆ ಅಗತ್ಯ ರಸಗೊಬ್ಬರ ಪೂರೈಕೆಗೂ ಸರ್ಕಾರ ಅವಕಾಶ ಕಲ್ಪಿಸಿದ್ದು, ರೈಲ್ವೇ ರೇಕ್ ಗಳಲ್ಲಿ ತಂದಂತಹ ರಸಗೊಬ್ಬರ ಚೀಲಗಳನ್ನು ಅನ್ಲೋಡ್ ಅಥವಾ ಇಳಿಸಲು ಸರ್ಕಾರ ವಿಧಿಸಿರುವ ಸಮಯವನ್ನೀಗ ವಿಸ್ತರಿಸಿದೆ.

ಇಲ್ಲಿಯವರೆಗೆ ಬೆ.6 ರಿಂದ 10 ರವರೆಗೆ ಮಾರ್ಗಸೂಚಿಯನ್ನು ಹೊರಡಿಸಲಾಗಿತ್ತು. ಇದರಿಂದ ರಸಗೊಬ್ಬರ ಇಳಿಸಲು ರೈಲ್ವೆ , ಮೂಲಕ ಬಂದಂತಹ ಕೃಷಿ ಪರಿಕರಗಳನ್ನು ಸಾಗಿಸಲು ಕಷ್ಟವಾಗುತ್ತಿರುವುದನ್ನು ಗಮನಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಮಾರ್ಗಸೂಚಿಯಲ್ಲಿ ಪರಿಷ್ಕರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಕಡಿಮೆ ಸಮಯದಲ್ಲಿ ರಸಗೊಬ್ಬರವನ್ನು ರೈಲ್ವೇ ಮೂಲಕ ಇಳಿಸಿ ಸರಬರಾಜು ಮಾಡಲು ತೊಂದರೆಯಾಗುವುದನ್ನು ಗಮನಿಸಿದ ಸರ್ಕಾರ ಸಚಿವರ ಮನವಿ ಮೇರೆಗೆ ರೈತರಿಗೆ ಹಾಗೂ ಸರಕು ಸಾಗಣೆ ಗುತ್ತಿಗೆದಾರರಿಗೆ ತೊಂದರೆಯಾಗದಂತೆ ಇದೀಗ ರೈಲ್ವೇ ರೇಕ್ ಗಳಲ್ಲಿ ತಂದಂತಹ ರಸಗೊಬ್ಬರ ಚೀಲಗಳ ಅನ್ಲೋಡ್ ಮಾಡುವ ಸಮಯವನ್ನು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ.

Exit mobile version