ಡಿಎಪಿ ರಸಗೊಬ್ಬರ ದರ ಇಳಿಕೆ

ಧಾರವಾಡ: ಡಿಎಪಿ ರಸಗೊಬ್ಬರ ದರ ಇಳಿಕೆ ಮಾಡಿ ಸರ್ಕಾರ ಆದೇಶಿಸಿದೆ. ಸಂಗ್ರಹವಿರುವ ಡಿಎಪಿ ರಸಗೊಬ್ಬರ ಪ್ರತಿ ಚೀಲಕ್ಜೆ 1200 ರೂ. ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಕಾಪು ದಾಸ್ತಾನು ಅಡಿ ಕೆಎಸ್ಸಿಎಮ್ಎಫ್ ದಲ್ಲಿ ಸಂಗ್ರಹವಿದ್ದ 1960 ಟನ್ ಡಿಎಪಿ ಗೊಬ್ಬರ ಪ್ರತಿ ಚೀಲಕ್ಕೆ 1450 ರೂ.ಗಳ ದರ ನಿಗದಿಪಡಿಸಲಾಗಿತ್ತು. ಈ ಕುರಿತು ಧಾರವಾಡ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿ, ರೈತರ ಅನುಕೂಲಕ್ಕಾಗಿ ಈಗಾಗಲೇ ಕಾಪು ದಾಸ್ತಾನಿರುವ ಡಿಎಪಿ ಗೊಬ್ಬರ ದರವನ್ನು 1200 ರೂ. ಗೆ ಮರು ನಿಗದಿಗೊಳಿಸಲು ಪತ್ರ ಕಳಿಸಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರು ದರ ಇಳಿಕೆ ಕುರಿತಾಗಿ ಪ್ರಯತ್ನ ನಡೆಸಿದ್ದರು. ಈಗಾಗಲೇ ಕಾಪು ದಾಸ್ತಾನು ಇರುವ ಡಿಎಪಿ ಗೊಬ್ಬರಕ್ಕೆ 1200 ರೂ. ನಿಗದಿಗೊಳಿಸಿದ್ದು, ಹೊಸ ದರದಲ್ಲಿ ಗೊಬ್ಬರ ಮಾರಾಟ ಮಾಡಲು ರಾಜ್ಯ ಸರ್ಕಾರದಿಂದ ಅನುಮತಿ ನೀಡಿದ್ದಾರೆ.

Exit mobile version