ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ ನಿಧನಕ್ಕೆ ಗಣ್ಯರ ಸಂತಾಪ

ಆಲಮಟ್ಟಿ : ನಗರದ ಆರ್‌ಬಿಪಿಜಿ ಹಳಕಟ್ಟಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಗುಲಾಬಚಂದ ಜಾಧವ ಅವರ ಕಿರಿಯ ಸಹೋದರ ಪ್ರಕಾಶ ಜಾಧವ ಅವರ ಅಕಾಲಿಕ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿ ಶೋಕ ವ್ಯಕ್ತಪಡಿಸಿದ್ದಾರೆ.

ನಗರದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ, ಆಲಮಟ್ಟಿ ಎಸ್‌ವಿವಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟರ, ಎಸ್‌ವಿವಿ ಶಿಕ್ಷಣ ಸಂಸ್ಥೆಯ ವಿವಿಧ ಶಾಲಾ, ಕಾಲೇಜುಗಳ ಮುಖ್ಯಸ್ಥ ಪಿ.ಎ.ಹೇಮಗಿರಿಮಠ, ಎಸ್.ಎಚ್.ಕೆಲೂರ. ಜಿ.ಎಂ.ಕೋಟ್ಯಾಳ, ಎಸ್.ಐ.ಗಿಡ್ಡಪ್ಪಗೋಳ ಸೇರಿದಂತೆ ಸಮಸ್ತ ಸಿಬ್ಬಂದಿ ವರ್ಗದವರು ಸಂತಾಪ ಮಿಡಿದಿದ್ದಾರೆ.

ವಿಧಾನಪರಿಷತ್ ಸದಸ್ಯ ಪ್ರಕಾಶ ರಾಠೋಡ, ಕೆಪಿಎಲ್ ಬಿಜಾಪುರ ಬುಲ್ಸ್ ಒಡೆಯ ಕಿರಣ ಕಟ್ಟಿಮನಿ, ಕೆಎಸ್‌ಸಿ ಸಂಯೋಜಕ ಡಾ.ಅಬ್ದುಲ್ ಹಕೀಮ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಎ.ಕಿಶೋರ್‌ಕುಮಾರ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಆಪ್ತ ಕಾರ್ಯದರ್ಶಿ ಎಸ್.ಎಸ್.ಬಿರಾದಾರ, ಬೆಂಗಳೂರಿನ ಯೂಜಿಸಿ ರೂಸಾ ಸಂಯೋಜಕ ಶ್ರೀಕಾಂತ, ತಹಶಿಲ್ದಾರರ ಪ್ರಶಾಂತ ಪಾಟೀಲ, ವಿನಯ ಕುಲಕರ್ಣಿ, ಪ್ರೋ.ಎಸ್.ಎಸ್.ರಾಜಮಾನ್ಯ, ಡಾ.ಬಾಬು ರಾಜೇಂದ್ರ ನಾಯಕ, ಮೋಹನ ಚವ್ಹಾಣ್, ರಾಚವಿವಿ ದೈಹಿಕ ಶಿಕ್ಷಣ ನಿರ್ದೇಶಕ ಜಗದೀಶ್ ಗಸ್ತಿ, ರವಿ ಗೋಲಾ, ಕವಿವಿ ಧಾರವಾಡದ ಡಾ.ವಿ.ಜಗದೀಶ್, ಡಾ.ಕೆ.ಸಿ.ತಾರಾಚಂದ, ಪತ್ರಕರ್ತ ಗಣೇಶ ಚಂದನಶಿವ, ಸಿಪಿಐ ನಾಗೇಶ, ಕಾಡದೇವರ, ಪ್ರೋ.ಬಿ.ಕೆ.ಕೊಣ್ಣೂರ, ಡಾ.ಬಿ.ಎಂ.ಕೋರಬು, ಡಾ.ಜಾವೀದ ಜಮಾದಾರ, ನಾಗೇಶ ಡೋಣೂರ, ರವಿಕುಮಾರ್ ಪುಲಸಸಿಂಗ ಚವ್ಹಾಣ್, ತಾ.ಪಂ ಉಪಾಧ್ಯಕ್ಷ ರಾಜು ಜಾಧವ, ಸಂತೋಷ ದಂಡ್ಯಾಗೋಳ, ದಯಾನಂದ ಮುಗಡ್ಲಿಮಠ, ಚಿದಾನಂದ ತೇರದಾಳ, ಕರವೇ ನಗರ ಅಧ್ಯಕ್ಷ ಫಯಾಜ ಕಲಾದಗಿ ಮೊದಲಾದವರು ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.

Exit mobile version