ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ಬಾಲೆ ಸೃುಷ್ಟಿ ಜಾಧವ

ಉತ್ತರಪ್ರಭ
ವಿಜಯಪುರ:
ಅವಳಿಗೆ ಅಜ್ಜಿಯಂದರೆ ಪ್ರಾಣ. ಕಾಕಾ ಎಂದರೆ ಎಲ್ಲಿಲ್ಲದ ಪ್ರೀತಿ. ಈ ಅಕ್ಕರೆಯ ಸಿಹಿ ಸಿಂಚನದ ಸಕ್ಕರೆಯಲ್ಲಿ ಬೆರೆತು ಬೆಳೆಯುತ್ತಿದ್ದಳು. ಆದರೆ ಕರೋನಾದ ಮೊದಲನೇ ಅಲೆ ಅಜ್ಜಿಯ ಜೀವಕ್ಕೆ ಕುತ್ತು ತಂದರೆ ಎರಡನೇ ಅಲೆ ಕಿರಿಯ ಕಾಕಾನ ಪ್ರಾಣವನ್ನೇ ಕಿತ್ತು ಹಾಕಿತ್ತು. ಅಮೂಲ್ಯ ಉಸಿರಿನಂತಿದ್ದ ಇವೆರಡು ಜೀವಿಗಳನ್ನು ಕಳೆದುಕೊಂಡ ರೋಧನ ಅಷ್ಟಿಷ್ಟಲ್ಲ. ಒಂದರ ಹಿಂದೆ ಒಂದು ಉರುಳಿ ಮರೆಯಾದ ಎರಡು ಜೀವಗಳ ನೆನಪಿನಲ್ಲೇ ದಿನಚರಿ ಸಾಗಿತ್ತು. ಬೆಂಗಳೂರಿನ ಸರಕಾರಿ ಪ್ರಥಮ ದಜೆ೯ ಕಾಲೇಜೊಂದರಲ್ಲಿ ದೈಹಿಕ ಶಿಕ್ಷಣ ನಿದೇ೯ಶಕರಾಗಿ ಸೇವೆ ಸಲ್ಲಿಸುತ್ತಿದ್ದ ಇವಳ ಕಿರಿಯ ಕಾಕಾ ದಿ,ಪ್ರಕಾಶ ಜಾಧವ ಹಠಾತ್ ಕರೋನಾ ಎರಡನೇ ಕದಂಬ ಬಾಹುಗೆ ಬಲಿಯಾದ ದುರ್ಘಟನೆಯಂತೂ ಅರಗಿಸಿಕೊಳ್ಳಲಾಗಲಿಲ್ಲಿ ಜಾಧವ ಕುಟುಂಬದವರಿಗೆ. ಸೂತಕದ ಛಾಯೇ ಆವರಿಸಿತ್ತು. ಬದುಕು ನೀರಿನ ಮೇಲಿನ ಗುಳ್ಳೆದಂತಾಗಿತ್ತು. ಆತಂಕದ ಕಾಮೋ೯ಡ ಫಸರಿಸಿತ್ತು. ಜೀವನ ನರಕ ಸದೃಶದ ಅನುಭವ ನೀಡವಂತಾಗಿತ್ತು. ಓದೋತ್ಸಾಹ ಕಳೆಗುಂದಿತ್ತು. ಜೀವನೋತ್ಸಾಹ ಮರೆಯಾಗಿತ್ತು.ಈ ಮಧ್ಯೆ ಮನೆ ಸದಸ್ಯರ ಮನಗಳೂ ಹೃದಯ ಭಾರವಾಗಿದ್ದವು.ನಿತ್ಯ ನೆನಪಿನ ಕಂಬನಿ.ತೀವ್ರ ನೋವು ಬಾಧೆಯಲ್ಲೂ ಪ್ರಸ್ತುತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 98.88 ಅಂಕ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಗೈದಿದ್ದಾಳೆ ಈ ಬಾಲೆ.
ಹೆಸರು ಸೃುಷ್ಟಿ ಜಾಧವ. ವಿಜಯಪುರ ಇಟಂಗಿಹಾಳದ ಎಕ್ಸಲೆಂಟ್ ಆಂಗ್ಲ ಮಾದ್ಯಮ ಪ್ರೌಢಶಾಲೆಯ ಈ ಪ್ರತಿಭಾನ್ವಿತ ವಿದ್ಯಾರ್ಥಿನಿ ತನ್ನ ಪ್ರೀತಿಪಾತ್ರ ಜೀವಗಳ ಮರೆಯಲ್ಲೂ ವಿಶೇಷ ಸಾಧನೆ ತೋರಿ ಗಮನ ಸೆಳೆದಿದ್ದಾಳೆ. ಅಜ್ಜಿಯ ವಾತ್ಸಲ್ಯ, ಕಾಕಾನ ಕಳಕಳಿ,ಅಂತಃಕರಣ, ಅವರಲ್ಲಿನ ಶಿಕ್ಷಣ ಪ್ರೇಮದ ಆಶೀರ್ವಾದವೇ ತನ್ನ ಇಂದಿನ ಶ್ರೇಯಸ್ಸಿಗೆ ಕಾರಣವಾಗಿದೆ. ಇದು ಅಗಲಿರುವ ನನ್ನ ಹಿರಿಯ ಚೇತನಗಳಿಗೆ ಅಪಿ೯ಸುವೆ, ಶ್ರದ್ಧೆಯಿಂದ ಶೈಕ್ಷಣಿಕ ಕಲಿಕಾ ಪಯಣ ಪೂರೈಸಿ ಗೌರವಯುತ ಹುದ್ದೆಗಳ ಸ್ಥಾನದೊಂದಿಗೆ ಮನೆತನದವರ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತೆನೆ. ಈಗ ಪ್ರಥಮ ಪಿಯುಸಿ ಸೈನ್ಸ್ ವಿಭಾಗಕ್ಕೆ ಪ್ರವೇಶ ಪಡೆಯಬಸಿರುವೆ ಎಂದು ಸೃುಷ್ಟಿ ಜಾಧವ ಹೇಳಿದಳು.
ಎಸ್ಸೆಸ್ಸೆಲ್ಸಿ ಮಹತ್ತರ ಘಟ ಎನ್ನುತ್ತಾರೆ. ನನ್ನ ಈ ಕಿರು ಸಾಧನೆಗೆ ಶಾಲಾ ಗುರುಬಳಗ ಸದಾ ಪ್ರೋತ್ಸಾಹ ನೀಡಿದರು. ನಮ್ಮ ಜಾಧವ ಪರಿವಾರ ನೋವಲ್ಲೂ ಸ್ಪೂರ್ತಿಯಾಗಿ ನೆಲೆ ನಿಂತರು.ಸಹಪಾಠಿ ಸ್ನೇಹಿತೆಯರ ಒಡನಾಟ, ಧೈರ್ಯ ಸಹಕರಿಸಿತು. ಗುರುಜಿಗಳ ಪಾಠ ಸರಿಯಾಗಿ ಗ್ರಹಿಸಿಕೊಂಡೆ, ಓದಿದ್ದು ಮನನದೊಂದಿಗೆ ಸ್ಪಷ್ಟ ಬರವಣಿಗೆ ಅಧ್ಯಯನದಲ್ಲಿ ನಿರತಳಾದೆ. ನಾಲ್ಕೈದು ತಿಂಗಳ ಮಾನಸಿಕವಾಗಿ ಸುಧಾರಿಸಿಕೊಂಡು ಕೊನೆಯಲ್ಲಿ ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಿ ಮನಸ್ಸಿಗೆ ಸಮಾಧಾನಕರ ಎನ್ನುವ ನಿಟ್ಟಿನಲ್ಲಿ ಫಲಿತಾಂಶ ಪಡೆದಿರುವೆ. ಅಜ್ಜಿ, ಅಜ್ಜಾ,ಕಾಕಾರ ಕೃಪೆಯೇ ನನಗೆ ಶ್ರೀರಕ್ಷೆ, ದೊಡ್ದಪ್ಪ ಡಾ.ಅಶೋಕಕುಮಾರ ಜಾಧವ,ಧಮೇ೯ಂದ್ರ ಜಾಧವ ಅವರ ಸಲಹೆ,ಮಾರ್ಗದರ್ಶನ, ಪೋಷಕರ ಬೆಂಬಲ ಸಾಧನೆಗೆ ಪ್ರೇರಣೆ ಎಂದು ಸೃುಷ್ಟಿ ಭಾವನಾತ್ಮಕವಾಗಿ ನುಡಿದಳು.
625 ಕ್ಕೆ 618 ಅಂಕ ಗಳಿಸಿ ಶೇ,98.88 ರಷ್ಟು ಪ್ರತಿಶತ ಪಡೆದಿರುವ ಸೃುಷ್ಟಿ ಜಾಧವ, ಕನ್ನಡ, ಗಣಿತ,ವಿಜ್ಞಾನ ವಿಷಯದಲ್ಲಿ ನೂರಕ್ಕೆ ನೂರರಷ್ಟು,ಇಂಗ್ಲೀಷ್ 122,ಹಿಂದಿ 99 ಹಾಗು ಸಮಾಜ ವಿಜ್ಞಾನದಲ್ಲಿ 97 ಅಂಕ ಸಂಪಾದಿಸಿದ್ದಾಳೆ.
ಇವಳ ತಂದೆ ಗುಲಾಬಚಂದ ಜಾಧವ ಆಲಮಟ್ಟಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Exit mobile version