ರಾಜ್ಯದಲ್ಲಿ ಕೋವಿಡ್ ಕರ್ಪ್ಯೂ! ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳೇನು?

ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಲಾಕ್ ಡೌನ್ ಮಾದರಿಯಲ್ಲೆ ರಾಜ್ಯ ಸರ್ಕಾರ ಕೋವಿಡ್ ಕರ್ಪ್ಯೂ ಘೋಷಿಸಿದೆ. ಸಚಿವ ಸಂಪುಟದಲ್ಲಿ ಈ ನಿರ್ಧಾರ ತೆಗೆದುಕೊಂಡು ಇನ್ನು ಹಲವು ನಿರ್ಧಾರಗಳನ್ನು ಸಂಪುಟ ಸಭೆಯಲ್ಲಿ ಸರ್ಕಾರ ತೆಗೆದುಕೊಂಡಿದೆ.

ಸಂಪುಟ ಸಭೆಯ ನಿರ್ಧಾರಗಳು

1, ಸರ್ಕಾರಿ ಆಸ್ಪತ್ರೆಗಳಲ್ಲಿ 18-45 ವಯಸ್ಸಿನ ಎಲ್ಲರಿಗೂ ಉಚಿತ ಲಸಿಕೆ ನೀಡಲು ಸರ್ಕಾರದ ನಿರ್ಧಾರ

2, 45 ವರ್ಷಕ್ಕಿಂತ ಮೇಲ್ಪಟ್ಟವರಗೆ ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡುತ್ತಿದ್ದು, 18 ರಿಂದ 45 ವಯಸ್ಸಿನೊಳಗಿನವರಿಗೆ ರಾಜ್ಯ ಸರ್ಕಾರದಿಂದ ಉಚಿತ ಲಸಿಕೆ ನೀಡಲು ನಿರ್ಧಾರ

3, ಮುಂದಿನ ಎರಡು ವಾರಗಳ ಕಾಲ ಬೆಳಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶವಿದ್ದು, ಉಳಿದೆಲ್ಲಾ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ.

4, ಗಾರ್ಮೆಂಟ್‌ ಫ್ಯಾಕ್ಟರಿ ಹೊರತು ಪಡಿಸಿ, ಉಳಿದೆಲ್ಲಾ ಕಾರ್ಖಾನೆಗಳೂ ಕಾರ್ಯಾಚರಿಸಬಹುದು

5, ಕೃಷಿ ಹಾಗೂ ಕನ್ಸ್ಟ್ರಕ್ಷನ್‌ ವಲಯದಲ್ಲಿ ಯಾವುದೇ ನಿರ್ಬಂಧವಿಲ್ಲ.

6, ಅಗತ್ಯ ಮೆಡಿಕಲ್‌ ಸಾಮಾಗ್ರಿಗಳು ದೊರೆಯಲಿವೆ.

7, ತಾಲೂಕ್‌ ಆಫೀಸರ್‌ ನೋಡಲ್‌ ಅಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಳ್ಳಬೇಕು.

8, ಇನ್ನುಮಂದೆ ಆಮ್ಲಜನಕ ಕೊರತೆ ಇರುವುದಿಲ್ಲ. 300 ರಿಂದ 800 ಮೆಟ್ರಿಕ್‌ ಟನ್‌ ಆಮ್ಲಜನಕ ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

9, ರೆಮಿಡಿಸನ್‌ ಔಷಧ 50 ಸಾವಿರದಿಂದ 1.20 ಲಕ್ಷದವರೆಗೆ ಏರಿಕೆ, ಹಾಗಾಗಿ ಔಷಧ ಕೊರತೆಯು ಇರುವುದಿಲ್ಲ.

10, ಅಂತಾರಾಜ್ಯ ಗೂಡ್ಸ್ ಟ್ರಾನ್ಸ್‌ಪೋರ್ಟ್‌ಗೆ ಯಾವುದೇ ತೊಂದರೆ ಇರಲ್ಲ. ಆದರೆ, ಸಾರಿಗೆ ಬಸ್‌ಗಳಿರಲ್ಲ.

11, ಎರಡು ವಾರದಲ್ಲಿ ಕರೋನಾ ನಿಯಂತ್ರಣಕ್ಕೆ ಬಾರದಿದ್ದರೇ ಮತ್ತಷ್ಟು ಬಿಗಿ ಕ್ರಮಗಳು ಮುಂದುವರೆಸಲು ಚಿಂತನೆ

Exit mobile version