ಆಕ್ಸಿಜನ್ ಬಗ್ಗೆ ಯಾರು ಭಯಪಡಬೇಡಿ: ಸಚಿವ ಪ್ರಹ್ಲಾದ್ ಜೋಷಿ

ಹುಬ್ಬಳ್ಳಿ: ಕೊವಿಡ್ ರೋಗಿಗಳಿಗಾಗಿ ವಿಶೇಷ ಹೆಚ್ಚುವರಿ 10 ಆ್ಯಂಬ್ಯುಲೇನ್ಸ್ ಸಿದ್ಧಪಡಿಸಲಾಗಿದೆ. ಜನರು ಜಾಗೃತರಾಗಿರಬೇಕು. ಆದರೆ ಜನರು ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅನಗತ್ಯವಾಗಿ ಜನರು ರಸ್ತೆಯಲ್ಲಿ ಓಡಾಡುವುದು ಬೇಡ. ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಅನಿರೀಕ್ಷಿತವಾಗಿ ಬಂದ ಈ ತುರ್ತು ಪರಿಸ್ಥಿತಿಯನ್ನು ದೈರ್ಯದಿಂದ ಎದುರಿಸಬೇಕಿದೆ. ಅಗತ್ಯಕ್ಕಿಂತಲೂ ಹೆಚ್ಚು ಜನರು ಭಯ ಭೀತಿ ಗೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ಎಲ್ಲ ರಾಜ್ಯಗಳಿಗೆ ಅಗತ್ಯ ವಾಕ್ಸಿನ್ ಪೂರೈಕೆ ಮಾಡುತ್ತಿದೆ ಎಂದರು.

ರೆಮಿಡಿಸಿವಿಯರ್ ಅಂತಿಮ ಪರಿಹಾರವಲ್ಲ. ರೆಮಿಡಿಸಿವರ್ ಕೊರತೆಯಾಗಿದೆ ಎಂದು ಗಾಬರಿ ಹುಟ್ಟಿಸುವ ಕೆಲಸ ವಾಗುತ್ತಿದೆ. ಹೀಗಾಗಿ ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದರು.

ದೊಡ್ಡ ನಗರಗಳಲ್ಲಿ ಆಕ್ಸಿಜನ್ ಕೊರತೆಯಾಗಿದ್ದು ನಿಜ. ಏರ್ ಲಿಪ್ಟಿಂಗ್, ರೈಲ್ವೆ ಮೂಲಕ ಆಕ್ಸಿಜನ್ ಪೂರೈಸುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ. ಕರ್ನಾಟಕದ ವಿಚಾರದಲ್ಲೂ ಕೇಂದ್ರ ಮುತುವರ್ಜಿ ವಹಿಸಿದೆ. ಆರೋಗ್ಯ ಸಚಿವರು ನಿರಂತರವಾಗಿ ಸಮರ್ಪಕದಲ್ಲಿದ್ದಾರೆ.
ಬಳ್ಳಾರಿಯಿಂದ ಪೂರೈಕೆಯಾಗುವ ಆಕ್ಸಿಜನ್ ಬಗ್ಗೆ ಮಾತುಕತೆ ನಡೆದಿದೆ. ಹೀಗಾಗಿ ಆಕ್ಸಿಜನ್ ಬಗ್ಗೆ ಯಾರು ಭಯಪಡಬೇಡಿ. ಇಂದಿನಿಂದ ಕೇಂದ್ರ ಸರ್ಕಾರ, ರಾಜ್ಯಕ್ಕೆ ಆಕ್ಸಿಜನ್ ಹಂಚಿಕೆ ಜಾಸ್ತಿ‌ಮಾಡಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ
ಎರಡು ಚೈಲ್ಡ್ ಆಂಡ್ ಮದರ್ ಕೇರ್ ಆಸ್ಪತ್ರೆ ಸಿದ್ದವಾಗುತ್ತಿದೆ ಎಂದರು.

80 ಕೋಟಿ‌ ಕುಟುಂಬಗಳಿಗೆ ಎರಡು ತಿಂಗಳು ಪಡಿತರ ನೀಡುವ ನಿರ್ಧಾರ ಮಾಡಲಾಗಿದೆ. ಈಗಾಗಲೇ ಕೋವಿಡ್ ನಿಯಂತ್ರಣ ಹಾಗು ಬೇಕಾಗುವ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

Exit mobile version