ಹಜ್ ಯಾತ್ರೆಯ ಬಗ್ಗೆ ಹಜ್ ಸಮಿತಿಯ ಮಹತ್ವದ ಮಾಹಿತಿ

ನವದೆಹಲಿ: ಈಗಾಗಲೇ ಕೊರೊನಾ ಕಾರಣ ಕಳೆದ ವರ್ಷವೂ ಹಜ್ ಯಾತ್ರೆಗೆ ಬ್ರೇಕ್ ಬಿದ್ದಿತ್ತು. ಈ ವರ್ಷ ಹಜ್ ಯಾತ್ರೆಗೆ ತೆರಳುವ ಬಗ್ಗೆ ಹಜ್ ಸಮಿತಿ‌ ಮಹತ್ವದ ಮಾಹಿತಿಯೊಂದನ್ನು ನೀಡಿದೆ.

ಹಜ್‌ ಯಾತ್ರೆಗೆ ತೆರಳುವಹ ಮುಸ್ಲಿಂ ಬಾಂಧವರು ಕೊರೊನಾ ಲಸಿಕೆಯ 2 ಡೋಸ್‌ ತೆಗೆದುಕೊಂಡಿದ್ದರೆ ಮಾತ್ರ ಯಾತ್ರೆಗೆ ಅವಕಾಶ ನೀಡಲಾಗುವುದು ಎಂದು ಹಜ್ ಸಮಿತಿ ಮಾಹಿತಿ ನೀಡಿದೆ.

ವಾರ್ಷಿಕ ಹಜ್‌ಗೆ ಹೋಗುವ ಎಲ್ಲ ಮುಸ್ಲಿಮರಿಗೆ ಕೊರೊನಾ ಲಸಿಕೆ ತೆಗೆದುಕೊಂಡ ಎರಡೂ ಪ್ರಮಾಣವನ್ನು ತೆಗೆದುಕೊಂಡು ಬರ್ಬೇಕು. ಆನಂತ್ರವಷ್ಟೇ ಭೇಟಿಗೆ ಅವಕಾಶ ನೀಡ್ತೇವೆ ಎಂದು ಹಜ್ ಸಮಿತಿ ಘೋಷಣೆ ಮಾಡಿದೆ.

ಈ ಮಧ್ಯೆ ಕೊರೊನಾ ಉಲ್ಭಣವಾಗ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಜನರಿಗೆ 72 ಗಂಟೆಗಳ ಕಾಲ ಸಂಪರ್ಕ ತಡೆಯನ್ನ ಮಾಡಲು ಸೌದಿ ಸರ್ಕಾರ ಆದೇಶಿಸಿದೆ. ಸಾಮಾನ್ಯ ಅಂತರ ಸೇರಿದಂತೆ ಇತರ ನಿಯಮಗಳ ಜೊತೆಗೆ ಮಾಸ್ಕ್ ಧರಿಸದವರನ್ನು ನಿಷೇಧಿಸಲಾಗುವುದು. ಇನ್ನು ವಸತಿ ಸ್ಥಳಗಳಲ್ಲಿ ಒಂದರಿಂದ ಒಂದೂವರೆ ಮೀಟರ್ ದೂರವನ್ನ ನಿರ್ವಹಿಸಬೇಕಾಗುತ್ತದೆ ಎನ್ನಲಾಗ್ತಿದೆ.

2021 ರ ಜುಲೈ 19 ಅಥವಾ 20 ರಂದು ಹಜ್ ನಡೆಸಬೇಕಿದೆ. ಆದ್ರೆ, ಕೊರೊನಾದ ಕಾರಣದಿಂದಾಗಿ ಎಷ್ಟು ಜನರಿಗೆ ಹಜ್ ತೀರ್ಥಯಾತ್ರೆಗೆ ಸೇರಲು ಅವಕಾಶ ನೀಡಲಾಗುವುದು ಎಂದು ಸೌದಿ ಸರ್ಕಾರ ಇನ್ನೂ ನಿರ್ಧರಿಸಿಲ್ಲ.

Exit mobile version