ಬೆಂಗಳೂರು : ಬಿಜೆಪಿಯ ಹಮ್ ದೋ ಹಮಾರೆ ದೋ ಸರ್ಕಾರದಲ್ಲಿ ಅಂಬಾನಿಗಿರುವ ಪ್ರಾಮುಖ್ಯತೆ ಯೋಧರಿಗಿಲ್ಲ ಎಂದು ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಟೀಕಿಸಿದೆ.
ಮುಖೇಶ್ ಅಂಬಾನಿ ಮನೆಯ ಮುಂದೆ ಸ್ಫೋಟಕ ಪತ್ತೆಯಾದುದನ್ನು ಆದ್ಯತೆ ಮೇರೆಗೆ ಗಡಿಬಿಡಿಯಲ್ಲಿ ಎನ್ಐಎ ಪ್ರಕರಣ ಭೇದಿಸಿದೆ, ಸಂತೋಷ. ಆದರೆ, ಪುಲ್ವಾಮದಲ್ಲಿ 350 ಕೆಜಿ ಸ್ಫೋಟಕ ಬಂದಿದ್ದು ಹೇಗೆಂದು ಇಷ್ಟು ದಿನವಾದರೂ ಎನ್‌ಐಎಗೆ ಬಹಿರಂಗಪಡಿಸಲು ಸಾಧ್ಯವಾಗಿಲ್ಲ ಏಕೆ ಎಂದು ಪ್ರಶ್ನಿಸಿದರು.
