ಬೆಂಗಳೂರು: ವಾಹನದ ನಮಬರ್ ಪ್ಲೇಟ್ ಮೇಲೆ ನೋಂದಣಿ ಸಂಖ್ಯೆ ಬಿಟ್ಟು ಬೇರೆ ಏನೇ ಇದ್ದರು ಅಂತಹ ವಾಹನ ಸವಾರರ ಮೇಲೆ ಕ್ರಮ ಜರುಗುಸಲಾಗುವುದು ಎಂದು ಪ್ರದೇಶಿಕ ಸಾರಿಗೆ ಕಚೇರಿ (ಆರ್ ಟಿ ಒ) ಆದೇಶ ಹೊರಡಿಸಿದ್ದು, ಮೇ 12 ರಿಂದಲೇ ಈ ನಿಯಮ ಜಾರಿಗೆ ಬರಲಿದೆ.
ಹೌದು! ಉತ್ತರ ಪ್ರದೇಶದಲ್ಲಿ ವಾಹನಗಳ ಮೇಲೆ ಯಾವುದೇ ಜಾತಿ ಹೆಸರನ್ನು ಬರೆಸಿಕೊಳ್ಳುವುದು ಅಪರಾಧ ಎಂದು ಅಲ್ಲಿನ ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ ಈ ಘೋಷಣೆ ಮಾಡಲಾಗಿದೆ.
ನಿಮ್ಮ ಗಾಡಿಯ ಮೇಲೆ ಮೋಟಾರು ವಾಹನ ಖಾಯ್ದೆ 50-51ರ ಅನುಗುಣವಾಗಿ ವಾಹನಗಳ ನಂಬರ್ ಇರಬೇಕು. ಅದನ್ನು ಹೊರೆತಾಗಿ ಸಂಘ ಸಂಸ್ಥೆಯ ಹೆಸರೋ, ಹುದ್ದೆಯ ಹೆಸರು, ಇಲಾಖೆಯ ಹೆಸರು ಇನ್ನಿತರ ಬರಹಗಳು ಇದ್ದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರ್ಟಿಒ ಪ್ರಕಟಣೆಯಲ್ಲಿ ತಿಳಿಸಿದೆ.
ವಾಹನ ಸವಾರರಿಗೆ ಆರ್ ಟಿ ಒ ಶಾಕ್..!
