ಪಶುವೈದ್ಯಕೀಯ ಕಾಲೇಜಿಗೆ ನೀರು ಕೊಡಿ

ಗದಗ: ಪಶುವೈದ್ಯಕೀಯ ಕಾಲೇಜಿಗೆ ನೀರು ಒದಗಿಸಿ ಎಂದು ಒತ್ತಾಯಿಸಿ ಪಶುವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಪಾಲಕ ಅಭಿಯಂತರ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ನಗರದ ಕಾರ್ಯಪಾಲಕ ಅಭಿಯಂತರ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಎದುರು ಪ್ರತಿಭಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದರು.

ಈ ವೇಳೆ ವಿದ್ಯಾರ್ಥಿ ಮುಖಂಡ ಮಾತನಾಡಿ, ಕಳೆದ ಮರ‍್ನಾಲ್ಕು ವರ್ಷದಿಂದ ಕಾಲೇಜಿನಲ್ಲಿ ನೀರಿನ ಕೊರತೆ ಇದೆ. ಈಗ ಕಳದೆ 1 ವರ್ಷದಿಂದ ಸಂಪೂರ್ಣವಾಗಿ ನೀರಿಲ್ಲ. ಕಾಲೇಜಿನಲ್ಲಿ ಒಂದು ಬೊರವೆಲ್ ಇದ್ದರೂ ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ. ವಿದ್ಯಾರ್ಥಿಗಳು ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ ಎಂದು ಆಕ್ರೋಶ ಹೊರಹಾಕಿದರು.

ನಾವು ಈಗಾಗಲೇ ಒಂದು ಬಾರಿ ಪೈಪ್‌ಲೈನ್ ಜೋಡಿಸಿ ಕಾಲೇಜಿಗೆ ನೀರು ಪೂರಯಕೆ ಮಾಡಿದ್ದೇವೆ. ಆದರೆ, ರೈಲ್ವೆ ಇಲಾಖೆಯವರು ಹಳಿ ಜೋಡಿಸು ವೇಳೆ ಪೈಪ್ ಒಡೆದು ಹೋಗಿದೆ. ಇದರ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಪಶುವೈದ್ಯಕೀಯ ಕಾಲೇಜಿಗೆ ನೀರು ಹರಿಸುತ್ತೇವೆ.

– ಡಾ.ಆರ್.ನಾಗರಾಜ, ಡೀನ್ ಅಧಿಕಾರಿ

ಪಶುವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿ ಮತ್ತು ಸಿಬ್ಬಂದಿ ಸೇರಿ ಸುಮಾರು 300 ಜನರಿದ್ದಾರೆ. ಆದರೆ, ಕುಡಿಯಲು ನಿರಿಲ್ಲದಂತಾಗಿದೆ. ಟ್ಯಾಂಕ್ ಮೂಲಕ ನಮಗೆ ನಿಡುವ ನೀರಿನಲ್ಲಿ ಪ್ಲೋರೈಡ್ ಕಂಟೆಂಟ್ ಹೆಚ್ಚಿನ ಪ್ರಮಾಣದಲ್ಲಿ ಇದೆ. ಅದರಿಂದ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ನೀರಿನ ತೊಂದರೆಯ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅವರು ಕ್ಯಾರೆ ಎನ್ನದೇ ಸುಮ್ಮನಾಗಿದ್ದಾರೆ. ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ಬಾರಿ ಓದುವುದು ಬಿಟ್ಟು ಪ್ರತಿಭಟಿಸುವುದು ಆಗಲ್ಲ. ಕೂಡಲೇ ಅಧಿಕಾರಿಗಳು ಕ್ರಮ ಕೈಗೊಂಡು ಕಾಲೇಜಿನಲ್ಲಿ ನೀರು ಬರುವಂತೆ ಮಾಡಬೇಕು. ಕಾಲೇಜಿನಲ್ಲಿ ನೀರು ಬರುವವರೆಗೂ ನಾವು ನಿರಂತರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎಚ್.ಸಿ ಕಂಠಿ, ವಿನಾಯಕ, ಯಶವಂತ, ಮಾಲತೇಶ, ವಿಕ್ರಾಂತ, ಅಭಿಶೇಕ, ಜೀವನ್, ಮಧುನಂದನ, ಶ್ರೇಯಾ, ಚಾಂದನಿ, ಸಿಮ್ರಾನ್, ಕಾವ್ಯಾ, ಭಾವನಾ ಮುಂತಾದವರು ಪಾಲ್ಗೊಂಡಿದ್ದರು.

Exit mobile version