ಗದಗ: ಕನ್ನಡ ಮತ್ತು ಸಂಸ್ಕತಿ ಇಲಾಖೆ, ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಾಹಿತ್ಯ ಸಂಘ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ ಹಾಗು ಪ್ರಬಂಧ ಸ್ಪರ್ಧೆಆಯೋಜಿಸಲಾಗಿತ್ತು.
ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾಕಾರ್ಯಕ್ರಮವನ್ನುಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಸ್ಥಾನಿಕ ಆಡಳಿತ ಮಂಡಳಿಯ ಚೇರ್ಮನ್‌ರಜನಿ ಪಾಟೀಲ್ ಉದ್ಘಾಟಿಸಿದರು.
ವ್ಹಿ.ಡಿ.ಎಸ್.ಟಿ ಬಾಲಕರ ಪ.ಪೂ ಕಾಲೇಜಿನ ಪ್ರಾಚಾರ್ಯ ಪ್ರೊ.ಮಾರುತಿ ಕಟ್ಟಿಮನಿ ಮಾತನಾಡಿ, ಅಂಬೇಡ್ಕರ್ ಅವರು ಸಮಾಜದಲ್ಲಿ ಬೇರುಬಿಟ್ಟ ಜಾತಿವ್ಯವಸ್ಥೆ ನಿವಾರಣೆ, ಮಹಿಳಾ ಶಿಕ್ಷಣಕ್ಕೆ ನೀಡಿದ ಆದ್ಯತೆ ಹಾಗೂ ಮಾನವೀಯ ನೆಲೆಯಲ್ಲಿ ನಿಂತು ಹೋರಾಟ ಮಾಡಿಸಂಘರ್ಷ ಹಾಗು ಅವಮಾನಗಳನ್ನು ಎದುರಿಸಿದರು. ಒಂದು ವಿಷಯದ ಶ್ರೇಷ್ಠತೆಯು ಅದನ್ನು ಒಪ್ಪಿಕೊಂಡು ಆಧರಿಸಿ ಅನುಸರಣೆ ಮಾಡುವಜನರ ಮನೋಭೂಮಿಕೆಯನ್ನು ಅವಲಂಭಿಸಿದೆ ಎಂದು ತಿಳಿಸಿದರು.
ಪ್ರಬಂಧ ಸ್ಪರ್ಧೆಯಲ್ಲಿ ಕು. ಆಸ್ಮಾ ಕನ್ಯಾಳ ಪ್ರಥಮ ಸ್ಥಾನ, ಕು. ಬಾಖರಲಿಬೇಗ್ ದ್ವಿತೀಯ ಸ್ಥಾನ, ಸಭಾನೂರ್.ಎಂ.ಸುತಾರ್ ಮತ್ತು ಕು. ವೈಶಾಲಿ ನವಲೆ ತೃತೀಯ ಸ್ಥಾನ ಪಡೆದುಕೊಂಡರು. ಕು.ಆಸ್ಮಾ ಶಿರಹಟ್ಟಿ ಹಾಗೂ ಕು. ಯಶೋಧಾ ಬಂಡಿವಡ್ಡರ್ ಸಮಾಧಾನಕರ ಬಹುಮಾನ ಪಡೆದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಕು. ಹೀನಾ ನದಾಫ್ ಪ್ರಥಮ ಸ್ಥಾನ, ಕು. ಬಸಮ್ಮ ಪೂಜಾರಿ ದ್ವಿತೀಯ ಸ್ಥಾನ, ಕು. ನಾಗರಾಜ್ ಚಟ್ಟಿ ಹಾಗೂ ಕು. ಸುಶ್ಮಿತಾ ಮುಗಳಿ ತೃತಿಯ ಸ್ಥಾನ, ಕು. ಪ್ರೇಮ್ ಕುಮಾರ್ ಹರ್ತಿ ಮತ್ತು ಕು. ನಾಗರಾಜ್ ಸಂಗನಾಳ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಪ್ರಥಮದರ್ಜೆ ಸಹಾಯಕ ಸಿಬ್ಬಂದಿ ರಾಜಕುಮಾರ ಸೋಪಡ್ಲಾ, ಶ್ರೀನವೀನ್ ಹಾಗೂ ಮಹಾವಿದ್ಯಾಲಯದ ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಾಚಾರ್ಯ ಪ್ರೊ.ಎಂ.ಬಿ.ಕೊಳವಿ ಅಧ್ಯಕ್ಷತೆ ವಹಿಸಿದ್ದರು. ಜಿ.ಟಿ.ನಾಯಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರೊ.ವಿ.ಸಿ.ಚಿನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಪಿ.ಜೆ.ಕಟ್ಟಿಮನಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ವೀಣಾತಿರ್ಲಾಪುರ ವಂದಿಸಿದರು.
