ಆದರ್ಶ ವಿದ್ಯಾಲಯ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ರೋಣ: ತಾಲೂಕಿನ ಇಟಗಿಯ ಸರಕಾರಿ ಆದರ್ಶ ವಿದ್ಯಾಲಯಕ್ಕೆ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‌ಲೈನ್‌ದಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು 17.03.2021 ರವರೆಗೆ ವಿಸ್ತರಿಸಲಾಗಿದೆ.
ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಪಾಲಕರ, ಪೋಷಕರ ಮೊಬೈಲ್ ನಂಬರ್ ಮಾತ್ರ ನಮೂದಿಸಬೇಕು. ಸೈಬರ್ ಸೆಂರ‍್ನವರ ಮೊಬೈಲ್ ಫೋನ್ ಹಾಕಬಾರದು. ಪರೀಕ್ಷೆ ಅರ್ಜಿಯಿಂದ ದಾಖಲಾತಿ ಆಗುವವರೆಗೆ ಸಂಪೂರ್ಣ ಪ್ರಕ್ರಿಯೆ ಮೊಬೈಲ್ ಮೆಸೇಜ್ ಮೂಲಕ ನಡೆಯುತ್ತದೆ. ಪಾಲಕರು ವಿದ್ಯಾರ್ಥಿ/ನಿಯ ಎಸ್.ಎ.ಟಿ.ಎಸ್.ನಲ್ಲಿ ಎಲ್ಲ ದೋಷಗಳನ್ನು ಸಂಬAಧಪಟ್ಟ ಮುಖ್ಯೋಪಾಧ್ಯಾಯರಿಂದ ಸರಿಪಡಿಸಿಕೊಂಡು ಎಸ್.ಎ.ಟಿ.ಎಸ್ ನಂಬರಿನೊAದಿಗೆ ರೋಣ ಹಾಗೂ ಗಜೇಂದ್ರಗಡ ತಾಲೂಕಿನ 05ನೇ ತರಗತಿಯ ವ್ಯಾಸಂಗ ಪ್ರಮಾಣ ಪತ್ರ, ಜಾತಿ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ, ಅಂಗ ವೈಕಲ್ಯವಿದ್ದರೆ ಅಂಗವಿಕಲ ಪ್ರಮಾಣ ಪತ,್ರ ಮಕ್ಕಳು ಬೇರೇ ತಾಲೂಕಿನಲ್ಲಿ ಓದುತ್ತಿದ್ದರೆ ಇದೇ ತಾಲೂಕಿನಲ್ಲಿ ವಾಸವಿರುವ ಪೋಷಕರ ರಹವಾಸಿ ಪತ್ರ ಹಾಗೂ ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಬೇಕು. ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ರೋಣ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಸಿ.ಆರ್.ಪಿ ಹಾಗೂ ಮುಖ್ಯೋಪಾಧ್ಯಾಯರು ಸರಕಾರಿ ಆದರ್ಶ ವಿದ್ಯಾಲಯ ಇಟಗಿ ಇವರನ್ನು ಸಂಪರ್ಕಿಸಬಹುದಾಗಿದೆ.
ಮೊಬೈಲ್ ಸಂಖ್ಯೆ: 8762487691, 9108118015 ಪ್ರವೇಶ ಪರೀಕ್ಷೆ ಏಪ್ರೀಲ್ 25 ರಂದು ರವಿವಾರ ಬೆಳಿಗ್ಗೆ 10.30ರಿಂದ 01.00 ಗಂಟೆಯವರೆಗೆ ನಡೆಯುತ್ತದೆ.
www.schooleducation.kar.nic.in, wwwvidyavahini.karnataka.gov.in ಈ ವೆಬ್‌ಸೈಟ್ ಬಳಸಿ ಅರ್ಜಿ ಸಲ್ಲಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version