ಬೈಕ್ ಡಿಕ್ಕಿ: ಪಾದಚಾರಿ ಸಾವು

ಲಕ್ಷ್ಮೇಶ್ವರ: ಹಿಂದಿನಿಂದ ಬಂದ ಬೈಕ್ ಹರಿದು ವಾಯುವಿಹಾರಿ ಸ್ಥಳದಲ್ಲೇ ಸಾವಿನಪ್ಪಿದ ಘಟನೆ ತಾಲೂಕಿನ ರಾಮಗೇರಿ ಗ್ರಾಮದಲ್ಲಿ ನಡೆದಿದೆ. ಶನಿವಾರ ಬೆಳಗಿನ ಸಮಯದಲ್ಲ್ಲಿ ವಾಯುವ ವಿಹಾರಕ್ಕೆ ತೆರಳಿದ್ದ ಹನಮಂತಪ್ಪ ಕಾಳೆ(52) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 

ಕಿತ್ತೂರು ಗ್ರಾಮದ ಬೈಕ್ ಚಾಲಕ ಗಾಯಗೊಂಡಿದ್ದಾನೆ. ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ ಪಿಎಸ್‌ಐ ಶಿವಯೋಗಿ ಲೋಹರ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version