ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಮತ್ತು ನವರಸನಾಯಕ ಜಗ್ಗೇಶ್ ನಡುವಿನ ವಾಗ್ವಾದ ತಾರಕಕ್ಕೇರಿದೆ. ಇದಕ್ಕೆಲ್ಲ ಕಾರಣವಾಗಿದ್ದು ಒಂದು ಆಡಿಯೋ ಕ್ಲಿಪ್.
ಹೌದು, ಇನ್ಸ್ ಪೆಕ್ಟರ್ ವಿಕ್ರಮ್ ಸಿನಿಮಾ ನಿರ್ಮಾಪಕ ವಿಖ್ಯಾತ್ ಜೊತೆ ಜಗ್ಗೇಶ್ ಮಾತಾಡಿರುವ ಆಡಿಯೋ ಲೀಕ್ ಆಗಿದ್ದೇ ಈ ವಿವಾದಕ್ಕೆ ಕಾರಣವಾಗಿದೆ. ಈ ಆಡಿಯೋದಲ್ಲಿ ಜಗ್ಗೇಶ್, ದರ್ಶನ್ ಬಗ್ಗೆ ಅವಹೇಳಕಾರಿ ಪದ ಬಳಸಿದ್ದಾರೆ ಎನ್ನುವುದು ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರೆಸ್ ನೋಟ್ ರಿಲೀಸ್ ಮಾಡಿರುವ ವಿಖ್ಯಾತ್, ಈ ಆಡಿಯೋದಲ್ಲಿರುವ ಧ್ವನಿ ನನ್ನದೆ ಆದರೆ ಆಡಿಯೋವನ್ನು ತಾನು ಲೀಕ್ ಮಾಡಿಲ್ಲ ಎಂದು ಹೇಳಿದ್ದಾರೆ. ಫೆ.9 ರಂದು ಜಗ್ಗೇಶ್ ರವರು 8.30 ರ ಸುಮಾರಿಗೆ ನನಗೆ ಫೋನ್ ಕಾಲ್ ಮಾಡಿ ಮಾತನಾಡುತ್ತಾರೆ. ಆ ಪೋನ್ ಕಾಲ್ ಈಗ ಎಲ್ಲಡೆ ವೈರಲ್ ಆಗಿದ್ದು, ಆ ಫೋನ್ ಕಾಲ್ ನಾನು ರೇಕಾರ್ಡ್ ಮಾಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿಲ್ಲ ಎಂದು ಆ ದೇವರ ಮೇಲೆ ಪ್ರಮಾಣಿಕರಿಸುತ್ತೇನೆ ಎಂದರು
