ದೇಶದ ಜನರಲ್ಲಿ ಹೊಸ ಪ್ರಭೇದ ಸೊಂಕು ಪತ್ತೆ

ದೆಹಲಿ: ಜಗತ್ತಲ್ಲಿ ಕೊರೊನಾ ಸೊಂಕು ಜನರ ಬದುಕು ತೆಗೆದರೂ, ಇನ್ನು ತಣ್ಣಗಾಗುವ ಲಕ್ಷಗಳು ಕಾಣುತ್ತಿಲ್ಲ.

ಭಾರತದಲ್ಲಿ 2ನೇ ಅಲೆಯ ಆತಂಕ ಆರಂಭವಾಗಿದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾ 2ನೇ ಅಲೆ ಕಂಡುಬಂದಿದ್ದು, ಹೆಚ್ಚು ಪ್ರಕರಣಗಳು ವರದಿಯಾಗಿವೆ. ಕೇರಳದಲ್ಲಿ ಎರಡೂವರೆ ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, ಮಹಾರಾಷ್ಟ್ರವೊಂದಲ್ಲಿ 6 ಸಾವಿರ ಹೊಸ ಪ್ರಕರಣ ಪತ್ತೆಯಾಗಿದ್ದು, ಆತಂಕ ಎದುರಾಗಿದೆ. ಈ ಎರಡೂ ರಾಜ್ಯಗಳಲ್ಲದೆ ಛತ್ತೀಸ್ಗಢ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನದಲ್ಲೂ ರೂಪಾಂತರಿ ಕೊರೊನಾ ಪ್ರಕರಣಗಳ ಸಂಖ್ಯೆ ಕಂಡುಬರುತ್ತಿವೆ.

ಮಹಾರಾಷ್ಟ್ರ, ಕೇರಳ ಮತ್ತು ತೆಲಂಗಾಣದಲ್ಲಿ ದಕ್ಷಿಣ ಆಫ್ರಿಕಾದ ಸೇರಿದಂತೆ ದೇಶದಲ್ಲಿ ಒಟ್ಟು 6 ಜನರಲ್ಲಿ ಹೊಸ ಪ್ರಭೇದದ ಕೊರೊನಾ ವೈರಸ್ ಪತ್ತೆ ಆಗಿದೆ ಎಂದು ಅಂತಾ ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಹೇಳಿದ್ದಾರೆ. ಆದರೆ, ಕೊರೊನಾ ಕೇಸ್ಗಳ ಏರಿಕೆಗೆ ಈ ಹೊಸ ಪ್ರಭೇದದ ವೈರಸ್ ಕಾರಣವಲ್ಲ ಅನ್ನೋದನ್ನ ಪೌಲ್ ಸ್ಪಷ್ಟಪಡಿಸಿದ್ದಾರೆ.

ದೇಶದ ಸಕ್ರಿಯ ಪ್ರಕರಣಗಳಲ್ಲಿ ಕೇರಳದಲ್ಲಿ ಶೇ.38, ಮಹಾರಾಷ್ಟ್ರದಲ್ಲಿ ಶೇ.37 ರಷ್ಟು ಪ್ರಕರಣಗಳಿವೆ. ಹೀಗಾಗಿ ಈ ಎರಡೂ ರಾಜ್ಯಗಳನ್ನೇ ಗಮನದಲ್ಲಿಟ್ಟುಕೊಂಡು ಕೇಂದ್ರ ಹೊಸ ಕಾರ್ಯತಂತ್ರ ರೂಪಿಸುತ್ತಿದೆ.

Exit mobile version