ರೈತ ವಿರೋಧಿ ಕಾಯ್ದೆ ಹಾಗೂ ಬೆಲೆ ಏರಿಕೆ ಖಂಡಿಸಿ ರ್ಯಾಲಿ ಪ್ರತಿಭಟನೆ.

ಮುಂಡರಗಿ: ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರರ್ಕಾರ, ಸುಳ್ಳು ಆಶ್ವಾಸನೆ ನೀಡುವದರ ಮೂಲಕ ಅಧಿಕಾರವನ್ನು ಪಡೆದುಕೊಂಡ ಮೇಲೆ ಚುನಾವಣೆಯ ಸಂಧರ್ಭದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರಿಗೆ ಹೊರೆಯಾಗುತ್ತಿದೆ ಎಂದು ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ ಆಕ್ರೋಶ ಹೊರಹಾಕಿದರು.

ಜನವಿರೋಧಿ ನೀತಿ ಕಂಡಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಪಕ್ಷದಿಂದ ಮುಂಡರಗಿ ನಗರದಲ್ಲಿ ಹಮ್ಮಿಕೊಂಡ ಟ್ರ್ಯಾಕ್ಟರ ರ್ಯಾಲಿ ಪ್ರತಿಭಟನೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದಾಗಿನಿAದ ಸಂಪೂರ್ಣ ಆಡಳಿತ ವ್ಯವಸ್ಥೆಯು ಕುಸಿದುಹೊಗಿದ್ದು, ಯಾವುದೇ ಅಭಿವೃದ್ದಿ ಕೆಲಸ ಕಾರ್ಯಗಳು ಆಗದೆ ಇದ್ದರಿಂದ ಬಡವರು, ಕೂಲಿ ಕಾರ್ಮಿಕರು, ಕೃಷಿ ಕೂಲಿಕಾರರು, ರೈತರು ತೊಂದರೆ ಅನುಭವಿಸುತ್ತಿದ್ದು, ಈ ಎಲ್ಲಾ ಸಮಸ್ಸೆಗಳನ್ನು ಸೃಷ್ಠಿಸುತ್ತಿರುವಂತಹ ಕೇಂದ್ರ ಹಾಗೂ ರಾಜ್ಯ ಸರರ್ಕಾರಗಳ ಜನ ವಿರೋಧಿ ನೀತಿಗಳನ್ನು ಖಂಡಿಸಿ ಮುಂಡರಗಿ ನಗರದಲ್ಲಿ ಕರ್ನಾಟಕ ಕಾಂಗ್ರೆಸ್ ಸಮಿತಿಯ ಆದೇಶದ ಅಡಿಯಲ್ಲಿ ಟ್ರ್ಯಾಕ್ಟರ ರ್ಯಾಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ, ಕೇಂದ್ರ ಗೃಹ ಮಂತ್ರಿ ಅಮೀತ ಶಾ, ಅಸುರ ಸಂಸ್ಕೃತಿಗೆ ಸೇರಿದವರು, ಅದಕ್ಕಾಗಿ, ಜ್ಯಾತ್ಯಾತೀತವಾಗಿ ಹಾಗೂ ಧರ್ಮಾತೀತವಾಗಿ ಸುಂದರವಾದ ಭಾರತ ದೇಶವನ್ನು ಧರ್ಮ, ಮತ್ತು ಜಾತಿಯ ಹೆಸರಲ್ಲಿ, ಗಲಭೆ ಸೃಷ್ಟಿಸಿ ಬಂಡವಾಳ ಶಾಹಿಗಳ ಪರವಾಗಿ ಯೋಜನೆ ರೂಪಿಸಿ ಕೃಷಿಕರನ್ನು, ಕೂಲಿ ಕಾರ್ಮಿಕರನ್ನು, ಬಡವರನ್ನು, ಬಿದಿ ವ್ಯಾಪಾರಿಗಳನ್ನು ನಾಶ ಮಾಡುವದಕ್ಕೆ ಹೊರಟ್ಟಿದ್ದಾರೆ. ಆದ್ದರಿಂದ, ಜನರು ಜಾಗೃತರಾಗಿ ಅಸುರು ಸಂಸ್ಕೃತೀಯ ಬಿಜೆಪಿಗೆ ತಕ್ಕ ಪಾಠ ಕಲಿಸುವದಕ್ಕೆ ಮುಂದಾದರೆ ಮಾತ್ರ ಈ ದೇಶದಲ್ಲಿ ಶಾಂತಿ, ನೆಮ್ಮದಿ, ಹಾಗೂ ಅಭಿವೃದ್ದಿ ಸಾಧ್ಯ ಎಂದರು.

ಜಿ.ಪA. ಅಧ್ಯಕ್ಷ ಈರಣ್ಣ ನಾಡಗೌಡರ, ರಾಜ್ಯ ಮಹಿಳಾ ಕಾಂಗ್ರೇಸ್ ಸಮಿತಿ ಸದಸ್ಯೆ ಶೋಭಾ ಮೇಟಿ,  ತಾ.ಪಂ. ಸದಸ್ಯ ರುದ್ರಗೌಡ ಪಾಟೀಲ, ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಾಮು ಕಲಾಲ, ತಾಲೂಕು ಯುವ ಕಾಂಗ್ರೇಸ್ ಅಧ್ಯಕ್ಷ ಮಂಜುನಾಥಗೌಡ ಗೌಡ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಸುಲೇಮಾನ ಬೇವೂರು, ದುದ್ದುಸಾಬ ಕಾತರಕಿ ಮುಂತಾದವರು ಉಪಸ್ಥಿತರಿದ್ದರು.

Exit mobile version