ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ

ಮುಳಗುಂದ: ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ ಎಂಬ ಘೋಷವಾಕ್ಯದೊಂದಿಗೆ ಮೊದಲ ಗ್ರಾಮವಾಸ್ತವ್ಯವನ್ನ ಗದಗ ಉಪವಿಭಾಗಧಿಕಾರಿ ರಾಯಪ್ಪ ಹುಣಸಿಗಿ ಅವರ ಅಧ್ಯಕ್ಷತೆಯಲ್ಲಿ ಗದಗ ತಾಲೂಕಿನ ಅಂತೂರ ಬೆಂತೂರ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಆರಂಭವಾಯಿತು.
ನಂತರ ಮಾತನಾಡಿದ ಅವರು ರೈತರ ಪಹಣಿಯಲ್ಲಿನ ದೋಷ, ಪೌತಿ ಸರಿಪಡಿಸಲು ಕ್ರಮ ವಹಿಸುವುದು. ಪಿಂಚಣಿ ಸೌಲಭ್ಯವನ್ನ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲಿಯೇ ಅರ್ಜಿ ಸ್ವೀಕರಿಸಿ ಆದೇಶ ನೀಡುವುದು. ಗ್ರಾಮದಲ್ಲಿ ಸ್ಮಶಾನ ಲಭ್ಯತೆ ಪರೀಶಿಲನೆ ಮತ್ತು ಅಭಿವೃದ್ದಿಗೆ ಚಿಂತನೆ, ಆಶ್ರಯ ಯೋಜನೆಗೆ ಅವಶ್ಯಕತೆ ಇದ್ದಲ್ಲಿ ಲಭ್ಯ ಜಮೀನು ಕಾಯ್ದಿರಿಸುವುದು. ಸರ್ಕಾರದ ಸೌಳಭ್ಯಗಳ ಕುರಿತು ಜಾಗೃತಿ ಮೂಡಿಸುದು ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಸೌಲಭ್ಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನ ಸ್ವೀಕರಿಸಿ ಸಾಧ್ಯವಿದ್ದಷ್ಟು ಸ್ಥಳದಲ್ಲೇ ಪರಿಹಾರ ಇಲ್ಲವೇ ನಿಗಧಿತ ಅವಧಿಯಲ್ಲಿ ಅರ್ಜಿ ವಿಲೇಯಾರಿಗೆ ಸೂಚನೆ ನೀಡಲಾಗುವದು. ಎಂದು ತಿಳಿಸಿದರು.
ನಂತರ ಗ್ರಾಮಸ್ಥರ ದೂರು ಆಲಿಸಿದ ಅವರು ಊರ ಕೆರೆಯ ಅಂತರ್ಜಲ ಹೆಚ್ಚಳದಿಂದ ಮನೆಯಲ್ಲಿ ನೀರು ಜೀನುಗಿ ಹಾನಿಯಾಗುತ್ತಿರುವ, ಅತಿವೃಷ್ಟಿಯಿಂದ ಹಾಳದ ಮನೆಗಳು, ಶಿಥಿಲಗೊಂಡ ಅಂಗನವಾಡಿ ಕಟ್ಟಡ, ರಸ್ತೆ ಮೇಲೆ ಚರಂಡಿ ನೀರು, ರೈತರ ಹೊಲಗಳಿಗೆ ರಸ್ತೆ ಸಂಕರ್ಪ ಸೇರಿದಂತೆ ಗ್ರಾಮದಲ್ಲಿನ ಕುಂದು ಕೊರತೆಗಳ ಸ್ಥಳಕ್ಕೆ ಭೇಟಿ ನೀಡಿ ಮದ್ಯಾಹ್ನದ ವರೆಗೂ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯ್ತಿ ಇಒ ಎಚ್‌.ಎಸ್.ಜಿನಗಾ,ಕಂದಾಯ ನಿರೀಕ್ಷಕ ಎಸ್‌.ಎಸ್. ಪಾಟೀಲ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಎಂ.ಹೆಬ್ಬಳ್ಳಿ, ತಾಕೂಕ ಆರೋಗ್ಯ ಇಲಾಖೆ ಅಧಿಕಾರಿ ಎಸ್.ಎಸ್.ನೀಲಗುಂದ, ಪಶು ಇಲಾಖೆ ಅಧಿಕಾರಿ ಡಾ.ತಿಪ್ಪಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಕಾರಿ ಲಲಿತಾ ಅಳವಂಡಿ, ಲೋಕೋಪಯೋಗಿ ಇಲಾಖೆ ಎಂಜನೀಯರ ದೇವರಾಜ್ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಭಾಗಹಿಸಿದ್ದರು. ಗ್ರಾ.ಪಂ ಅಧ್ಯಕ್ಷೆ ಯಲ್ಲವ್ವ ಹೊಸಮನಿ,ಉದ್ಯಕ್ಕೆ ನಿರ್ಮಲಾ ಹಸರಾಣಿ, ಗ್ರಾ.ಪಂ ಪಿಡಿಒ ಚೆಟ್ರಿ,ಗ್ರಾ.ಪಂ ಸದಸ್ಯರು ಸೇರಿದಂತೆ ಗ್ರಾಮಸ್ಥರು ಇದ್ದರು.

Exit mobile version