ಗೋಹತ್ಯೆ ನಿಷೇಧದಿಂದ ರೈತರಿಗೆ ಲಾಭ ; ಸಚಿವ ಚವ್ಹಾಣ್

ಚಾಮರಾಜನಗರ: ದೀಪಾವಳಿಗೆ ಗೋಮಾತೆ ಪೂಜಿಸುತ್ತೀರಿ, ಸಂಕ್ರಾಂತಿಗೆ ಪೂಜೆ ಮಾಡ್ತೀರಿ ಮತ್ತೆ ಗೋಮಾತೆಯನ್ನು ಕಟ್ ಯಾಕ್ ಮಾಡ್ತೀರಿ, ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಪ್ರಶ್ನಿಸಿದರು.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ನಿಷೇದ ಕಾಯ್ದೆಯಲ್ಲಿ ಯಾವುದೇ ಕಾಂಟ್ರೊವರ್ಸಿ ಇಲ್ಲಾ, ಒಂದು ವರ್ಷ ಸಮಯ ಕೊಡಿ, ಗೋ ಮೂತ್ರ, ಸಗಣಿ ಹಾಗೂ ಇತರೆ ಗೋ ಉತ್ಪನ್ನಗಳು ಹೇಗೆ ಲಾಭದಾಯಕವಾಗಲಿದೆ ಎಂದು ತೋರಿಸುತ್ತೇನೆ. ಗೋ ಹತ್ಯೆ ಮಾಡುವುದರಿಂದ ಏನು ಸಿಗದು, ಈಗಾಗಲೇ, 19 ರಾಜ್ಯಗಳಲ್ಲಿ ಗೋಹತ್ಯೆ ನಿಷೇಧವಾಗಿದೆ, ಈ ಕಾಯ್ದೆಯಿಂದ ರೈತರಿಗೆ ಲಾಭವಿದೆ ಎಂದು ಅವರು ಹೇಳಿದರು.

ಇನ್ನು, ರಾಮಮಂದಿರಕ್ಕೆ ಹಣ ಕೊಡಲ್ಲವೆಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಕೊಡಲ್ಲ ಅಂತಾರೆ ಅವರ ಮಗ ದೇಣಿಗೆ ಕೊಟ್ಟಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹಣ ಪಡೆದಿರುವ ಲೆಕ್ಕ ಪಾರದರ್ಶಕವಾಗಿದ್ದು, ಪ್ರತಿಯೊಂದಕ್ಕೂ ಲೆಕ್ಕ ಕೊಡುತ್ತೇವೆ ಎಂದರು.

ದೇಣಿಗೆ ಕೊಡದ ಮನೆಗಳನ್ನು ಗುರುತು ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ, ವಿಪಕ್ಷಗಳ ಕೆಲಸವೇ ವಿರೋಧಿಸುವುದು, ಅವರು ಬರೀ ಸುಳ್ಳು ಹೇಳಿದ್ದಾರೆ, ಅವರು ವಿರೋಧಿಸಲಿ ನಾವು ಕೆಲಸ ಮಾಡುತ್ತೇವೆಂದು ಪ್ರತಿಕ್ರಿಯಿಸಿದರು.

Exit mobile version