ಹಾವೇರಿ: ಯಡಿಯೂರಪ್ಪ ದಮ್ ನಿಂದಲೇ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗಿರೋದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಹಾವೇರಿಯಲ್ಲಿ ಹೇಳಿಕೆ ನೀಡಿದ ಅವರು, ಕೇಂದ್ರದಿಂದ ಹಣ ತರುವ ದಮ್ ಯಡಿಯೂರಪ್ಪಗೆ ಇಲ್ಲಾ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡಿಸಿದ ಅವರು, ಯಡಿಯೂರಪ್ಪ ದಮ್ ಏನು ಅನ್ನೋದು ಗೊತ್ತಾಗಿದೆ. ಅವರ ದಮ್ ನಿಂದಲೇ 17 ಶಾಸಕರು ಬಂದಿದ್ದು. 12 ಜನ ಗೆದ್ದಿದ್ದು, 10 ಜನ ಮಂತ್ರಿಯಾಗಿದ್ದು, ಇಬ್ಬರು ಎಂಲ್ ಸಿ ಆಗಿದ್ದು ಎಂದರು.
ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿಕೆ ಕುರಿತು ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಈಶ್ವರ ಖಂಡ್ರೆ ಭ್ರಮೆಯದು. ಅವರು ಏನೋ ಕಲ್ಪನಾ ಕಥೆಗಳನ್ನು ಕಟ್ಟಿಕೊಳ್ತಿದ್ದಾರೆ. ಅವರು ಸರಿ ಇದ್ದಿದ್ದರೆ ಯಾರು ಹೊರ ಬರುತ್ತಿದ್ದರು ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ವಿಶ್ವನಾಥ್ ಅವರಿಗೆ ಪರಿಷತ್ ಟಿಕೆಟ್ ಕೈ ತಪ್ಪಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅವರಿಗೆ ಟಿಕೆಟ್ ಕೊಡಬೇಕಾಗಿತ್ತು. ಕೊಡುತ್ತಾರೆ ಎಂದುಕೊಂಡಿದ್ದೆವು. ಈಗ ಇಬ್ಬರಿಗೆ ಕೊಟ್ಟಿದ್ದಾರೆ. ಮುಂಬರುವ ದಿನದಲ್ಲಿ ಅವರಿಗೂ ಕೊಡ್ತಾರೆ ಎಂದರು.
ಯಡಿಯೂರಪ್ಪ ದಮ್ ನಿಂದಲೇ ಸಿದ್ದು ವಿಪಕ್ಷ ನಾಯಕ: ಬಿ.ಸಿ.ಪಾಟೀಲ್
