ಎಲ್ಲ ಸಮುದಾಯಕ್ಕೂ ಮೀಸಲಾತಿ ಸಿಗಲಿ: ಕಾರಜೋಳ

ವಿಜಯಪುರ: ಸಾಂವಿಧಾನದ ಆಶಯದಂತೆ ಶೋಷಿತ ಎಲ್ಲ ಸಮುದಾಯಗಳಿಗೂ ಮುಖ್ಯವಾಹಿನಿಗೆ ಬರಲು ಮೀಸಲಾತಿ ಸಿಗಲಿ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲು ಸೌಲಭ್ಯಕ್ಕೆ ಹೋರಾಟ ನಡೆಸಿದ್ದು ತಪ್ಪೇನಲ್ಲ ಎಂದರು.
ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಶೋಷಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದೇ ಸಂವಿಧಾನದ ಆಶಯ. ಈ ಆಶಯದ ವ್ಯಾಪ್ತಿಗೆ ಬರುವ ಎಲ್ಲ ಸಮುದಾಯಗಳೂ ಮೀಸಲು ಸೌಲಭ್ಯ ಪಡೆಯಲಿ ಎಂದರು.

Exit mobile version