ಬೆಂಗಳೂರು : ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶ ಕಲ್ಪಿಸುವ ತಿದ್ಧುಪಡಿ ಮಸೂದೆಗಳಿಗೆ ವಿಧಾನ ಪರಿಷತ್ ಸೋಮವಾರ ಒಪ್ಪಿಗೆ ನೀಡಿದೆ. ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶ ಕಲ್ಪಿಸುವ ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ಮಸೂದೆ 2021 ಅನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮಂಡಿಸಿದರು.
ಪೌರಾಡಳಿತ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಕರ್ನಾಟಕ ಪೌರ ಸಭೆಗಳು ಮತ್ತು ಕೆಲವು ಇತರ ಕಾನುನು (ತಿದ್ದುಪಡಿ) ಮಸೂದೆ -2021, ಕರ್ನಾಟಕ ಪೌರಸಭೆಗಳ (ಎರಡನೇ ತಿದ್ದುಪಡಿ) ಮಸೂದೆ-2021 ಅನ್ನು ಪೌರಾಡಳಿತ ಸಚಿವೆ ಎಂಟಿಬಿ ನಾಗರಾಜ್ ಮಂಡಿಸಿದರು.
ಸ್ಥಿರಾಸ್ತಿ ಮಾರ್ಗಸೂಚಿ ದರದ ಆಧಾರದಲ್ಲಿ ಪ್ರತಿ ವರ್ಷವೂ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶ ನೀಡುವುದು, ತೆರಿಗೆ ಪರಿಷ್ಕರಣೆ ದರದಲ್ಲಿ ಹೆಚ್ಚಳ, ತೆರಿಗೆ ಪಾವತಿ ವಿಳಂಬವಾದರೆ ತಿಂಗಳಿಗೆ ಶೇ.2 ರಷ್ಟು ಬಡ್ಡಿ ವಿಧಿಸಲು ಸರ್ಕಾರ ಸಜ್ಜಾಗಿದೆ.
ಆಸ್ತಿ ತೆರಿಗೆ ಪರಿಷ್ಕರಣೆ ಮಸೂದೆ ; ವಿಧಾನ ಪರಿಷತ್ ಒಪ್ಪಿಗೆ
