ಗಾಂಧೀಜಿ ಪ್ರತಿಮೆ ದ್ವಂಸಗೊಳಿಸಿದ ಕಿಡಿಗೇಡಿಗಳು

ವಾಷಿಂಗ್ಟನ್ : ದೇಶದಲ್ಲಿ ಜ.30 ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಹುತಾತ್ಮರಾದ ದಿನ ಆಚರಿಸಲಾಗುತ್ತಿದ್ದು, ಅಮೇರಿಕದಲ್ಲಿ ಮಹಾತ್ಮ ಗಾಂಧೀಜಿ ಅವರ ಕಂಚಿನ ಪ್ರತಿಮೆಯನ್ನು ದ್ವಂಸಗೊಳಸಿದ್ದಾರೆ.

ಅಮೇರಿಕದ ಕ್ಯಾಲಿರ್ಪೋನಿಯಾದ ಡೇವಿಸ್ ನಗರದಲ್ಲಿ ಕಿಡಿಗೇಡಿಗಳಿಂದ ಈ ಘಟನೆ ನಡೆದಿದ್ದು, ಇದಕ್ಕೆ ಭಾರತೀಯ ಮೂಲದ ಅಮೆರಿಕನ್ನರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಡೇವಿಸ್ ನಗರ ಸ್ಥಳೀಯ ಆಡಳಿತದ ಸದಸ್ಯ ಲೂಕಸ್ ಫ್ರೀರಿಚ್ಸ್, ನಗರದ ಸೆಂಟ್ರಳ್ ಪಾರ್ಕ್ ನಲ್ಲಿರುವ ಗಾಂಧಿಜಿ ಅವರ 6 ಅಡಿ ಎತ್ತರದ, 294 ಕೆ.ಜಿ ತೂಕದ ಕಂಚಿನ ಪ್ರತಿಮೆಯನ್ನು ದ್ವಂಸಗೊಳಿಸಲಾಗಿದೆ. ಸದ್ಯ ಪ್ರತಿಮೆಯನ್ನು ಅಲ್ಲಿಂದ ತೆಗೆಯಲಾಗಿದ್ದು, ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.

ಜ.27 ರಂದು ದ್ವಂಸಗೊಂಡಿರುವ ಗಾಂಧಿ ಪ್ರತಿಮೆ ಪತ್ತೆಯಾಗಿತ್ತು. ಈ ಬಗ್ಗೆ ಪಾರ್ಕ್ ನ ಸಿಬ್ಬಂದಿ ಮಾಹಿತಿ ನೀಡಿದ್ದರು. ಗಾಂಧೀಜಿ ಅವರ ಪ್ರತಿಮೆಯು ಡೇವಿಸ್ ನಗರದ ಸಂಸ್ಕೃತಿಯ ಒಂದು ಭಾಗವಾಗಿದೆ. ನಾವು ಈ ಘಟಣೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version