ಹರ್ತಿ ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ

ಮುಳಗುಂದ: ತಾಲೂಕಿನ ಹರ್ತಿ ಗ್ರಾಮ ಪಂಚಾಯತಿಯ ಸಾರ್ವಜನಿಕ ಗ್ರಂಥಾಲಯದಲ್ಲಿ ಹೊಸದಾಗಿ ಅಳವಡಿಸಿದ ಡಿಜಿಟಲ್ ಗ್ರಂಥಾಲಯವನ್ನ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಸಾರ್ವಜನಿಕರು ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ಡಿಜಿಟಲ್ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇದು ಹೆಚ್ಚು ಸಹಕಾರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಜಿಪಂ ಉಪ ಕಾರ್ಯದರ್ಶಿ ಬಿ.ಕಲ್ಲೇಶ, ತಾಪಂ ಸದಸ್ಯ ಎಸ್.ಎಸ್.ಪಾಟೀಲ, ಗ್ರಾ.ಪಂ ಸದಸ್ಯರಾದ ನೀತಾ ಸಂಶಿ, ಯಲ್ಲಪ್ಪ ತಿಪ್ಪಣ್ಣವರ, ನೀಲವ್ವ ಡಂಬಳ, ಚನ್ನಬಸಗೌಡ ಪಾಟೀಲ, ಶಾರದಾ ಭಜಂತ್ರಿ, ಫಕ್ಕಿರಯ್ಯ ಮರಿದೇವರಮಠ, ಕಸ್ತೂರೆವ್ವ ಬಂಡಿವಡ್ಡರ, ಮಹೇಶ ಪಟ್ಟಣಶೆಟ್ಟಿ, ಹಾಲವ್ವ ಕುರಿ, ಮಹಾದೇವಿ ಬಳಿಗೇರ, ಪ್ರಕಾಶ ಕುರ್ತಕೋಟಿ, ಕೃಷ್ಣ ನಾಗಲೋಟ, ಪಾರ್ವತೇವ್ವ ಕುರ್ತಕೋಟಿ, ಗಂಗಪ್ಪ ಗಡಾದ, ರೇಣವ್ವ ತಳವಾರ, ಯಲ್ಲಪ್ಪ ಕೋರಿ, ಪಿಡಿಒ ಎಸ್.ಎಸ್.ಅಂಗಡಿ ಮೊದಲಾದವರು ಇದ್ದರು.

Exit mobile version