ಶಿರಹಟ್ಟಿ: ತಾಲೂಕಿನ ಮಾಗಡಿ ಗ್ರಾಪಂ ವ್ಯಾಪ್ತಿಯ ಪರಸಾಪೂರ (ವಾರ್ಡ ನಂ:6) ಗ್ರಾಮದಲ್ಲಿ ಶೇಂಗಾ ಬಣವಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಮಾಜಿ ಗ್ರಾಪಂ ಸದಸ್ಯ ಬಸಪ್ಪ ಬೇರಗಣ್ಣವರ ಸದ್ಯ ನಡೆಯುತ್ತಿರುವ ಚುನಾವಣೆಗೆ ಅವರ ಮಗನನ್ನು ಕಣಕ್ಕೆ ಇಳಿಸಿದ್ದರು.
ಅವಘಡದಿಂದ ಅಂದಾಜು 1.50 ಲಕ್ಷ ರೂ ಬೆಲೆಬಾಳುವ ಶೇಂಗಾ ಹಾಗೂ ಹೊಟ್ಟು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಗೆ ರಾಜಕೀಯ ವೈಷಮ್ಯವೇ ಕಾರಣವಿರಬಹುದು ಎನ್ನುವ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
