ಲಕ್ಷ್ಮೇಶ್ವರ : ಶೇಂಗಾ ಬಣವಿಗೆ ಬೆಂಕಿ ಲಕ್ಷಾಂತರ ಹಾನಿ

laxmeshwar former

ಲಕ್ಷ್ಮೇಶ್ವರ : ಶೇಂಗಾ ಬಣವಿಗೆ ಬೆಂಕಿ ಲಕ್ಷಾಂತರ ಹಾನಿ

ಲಕ್ಷ್ಮೇಶ್ವರ: ಶೇಂಗಾ ಬಣವಿಗೆ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ಹಾನಿಗೊಳಗಾದ ರೈತ ಕಂಗಾಲಾಗುವಂತಾಗಿದೆ.

ಲಕ್ಷ್ಮೇಶ್ವರ-  ಹರದಗಟ್ಟಿ ರಸ್ತೆಯ ಪಕ್ಕದಲ್ಲಿ ಜಮೀನಿನಲ್ಲಿದ್ದ ಬಣವಿಗೆ ಬೆಂಕಿ ಬಿದ್ದಿದ್ದು ರೈತ ನಿಂಗಪ್ಪ ಮಾಗಡಿ ತೀವ್ರ ಸಂಕಷ್ಟಕ್ಕೀಡಾಗುವಂತಾಗಿದೆ. ಅಂದಾಜು 15 ಟ್ಯಾಕ್ಟರ್ ಶೇಂಗಾ ಬೆಂಕಿಗೆ ಆಹುತಿಯಾಗಿದೆ. ಘಟನೆಯಿಂದ ಕುಟುಂಬ ಸದಸ್ಯರ ಗೊಳಾಟ, ರೈತನ ಆಕ್ರಂಧನ ಮುಗಿಲು ಮುಟ್ಟುವಂತಿತ್ತು. ಅಂದಾಜು 15 ಎಕರೆ  ಪ್ರದೇಶದಲ್ಲಿ ಬೆಳೆದ ಶೇಂಗಾ ಬೆಳೆ ಅಂದಾಜು 2 ಲಕ್ಷ ರೂಪಾಯಿ ಮೌಲ್ಯದ್ದಾಗಿತ್ತು ಎಂದು ಅಂದಾಜಿಸಲಾಗಿದೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಅಗ್ನಿಶಾಮಕ‌ ದಳದ ಸಿಬ್ಬಂದಿ‌ ಗಮಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಆದರೂ ಬಹುತೇಕ ಶೇಂಗಾ ಬಳ್ಳಿ ಬೆಂಕಿಗೆ ಆಹುತಿಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಲಕ್ಷ್ಮೇಶ್ವರ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದೆ.

Exit mobile version