ಮಹಾಂತೇಶ ಜೀವಣ್ಣವರ ಹೇಳಿಕೆ ಪ್ರಜಾಪ್ರಭುತ್ವ ಬಲಗೊಳಿಸಲು ಯುವಕರು ಕಡ್ಡಾಯವಾಗಿ ಮತದಾನ ಮಾಡಬೇಕು

grama panchayati election

ಗಜೇಂದ್ರಗಡ: ಪ್ರಜಾ ಪ್ರಭುತ್ವವನ್ನು ಬಲ ಪಡಿಸಲು ಯುವ ಸಮೂಹ ಕಡ್ಡಾಯವಾಗಿ ಚುನಾವಣಾ ಪ್ರಕ್ರೀಯೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರಜಾಪ್ರಭುತ್ವದ ಗೌರವ ಹೆಚ್ಚಿಸಬೇಕು ಎಂದು ಪ್ರಾಧ್ಯಾಪಕ ಮಹಾಂತೇಶ ಜೀವಣ್ಣವರ ಹೇಳಿದರು.

ಪಟ್ಟಣದ ಬಿ.ಎಸ್. ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ರಾಷ್ಟಿçÃಯ ಮತದಾರರ ದಿನಾಚರಣೆ ಪ್ರಯುಕ್ತ ತಾಲೂಕಾ ಮಟ್ಟದ ಪ್ರಬಂಧ, ರಸಪ್ರಶ್ನೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಜಾ ಪ್ರಭುತ್ವದಲ್ಲಿ ದೃಢ ವಿಶ್ವಾವವುಳ್ಳ ಭಾರತದ ಪ್ರತಿಯೊಬ್ಬರು ದೇಶದ ಪ್ರಜಾಸತ್ತಾತ್ಮಕ ಹಾಗೂ ನ್ಯಾಯ ಸಮ್ಮತ ಚುನಾವಣೆಗಳನ್ನು ನಡೆಸಬೇಕಾದರೆ ಜಾತಿ ಜನಾಂಗ, ಧರ್ಮ, ಮತ, ಮತ್ತು ಭಾಷೆ ಯಾವುದೇ ಪ್ರೇರೆಪಣೆಗಳಿಂದ ಪ್ರಭಾವಿತರಾಗದೇ ಮತ ಚಲಾಯಿಸಬೇಕು ಎನ್ನುವುದು ಮತದಾರ ದಿನಾಚರಣೆಯ ಮೂಲ ಉದ್ದೇಶವಾಗಿದೆ.

ಸಂವಿಧಾನದ ಹಕ್ಕುಗಳಲ್ಲಿ ಅತ್ಯಂತ ಪ್ರಾಮುಖ್ಯವಾದ ಮತದಾನದ ಹಕ್ಕು ತನ್ನದೆ ಆದ ವಿಶೇಷತೆಯನ್ನು ಹೊಂದಿದೆ. ಜೊತೆಗೆ ಪ್ರಜಾ ಪ್ರಭುತ್ವದ ಗಟ್ಟಿತನಕ್ಕೆ ಸಹಕಾರಿಯಾಗಿದೆ. ಈ ದಿಸೆಯಲ್ಲಿ ಮತದಾನ ಪವಿತ್ರ ಕರ್ತವ್ಯವಾಗಿದ್ದು ೧೮ ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯನು ಗುರುತಿನ ಚೀಟಿ ಪಡೆಯುವುದು ಅವಶ್ಯವಿದೆ ಎಂದರು.

ಪ್ರಾಚಾರ್ಯ ಎಸ್.ಎಸ್. ಕೆಂಚನಗೌಡರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವ ಮತ್ತು ಅದರ ಮೌಲ್ಯಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮತದಾನವೆಂಬ ಅಸ್ತç ನೀಡಲಾಗಿದೆ. ಸಮರ್ಪಕವಾಗಿ ಇದರ ಸದುಪಯೋಗ ಆಗಬೇಕಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಂತಹ ಕಾರ್ಯ ನಮ್ಮದಾಗಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನ ಎಲ್ಲ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ವಿಪ್ ಸಮಿತಿ ಸಂಯೋಜನಾಧಿಕಾರಿ ಡಾ.ಪಿ.ಎಚ್.ಕ್ಯಾರಕೊಪ್ಪ, ಡಾ. ಕರುಣೇಶಕುಮಾರ, ಮಹೇಂದ್ರ ಜಿ, ಹೀತೇಶ ಬಿ, ಲಕ್ಕಣ್ಣ ಈ. ಎನ್, ಸಿದ್ದೇಶ ಕೆ, ಬಿ.ವಿ. ಮುನವಳ್ಳಿ, ಎಸ್. ಎಚ್. ಪವಾರ, ಪಿ.ಎಂ.ದಿವಾಣದ, ಐ.ಎನ್.ಹಾಳಿ, ಲಕ್ಷಿö್ಮÃ, ಎಚ್.ಎಚ್.ಮಾದರ ಸೇರಿ ಇತರರು ಇದ್ದರು.

Exit mobile version