ಗಜೇಂದ್ರಗಡದಲ್ಲಿ ಉಪ ಖಜಾನೆ ಕಚೇರಿ ಆರಂಭ

mla kalakappa bandi

ಗಜೇಂದ್ರಗಡ: ಸರ್ಕಾರದ ಹಣಕಾಸಿನ ವ್ಯವಹಾರವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಗಜೇಂದ್ರಗಡ ತಾಲೂಕಿನಲ್ಲಿ ಉಪ ಖಜಾನೆ ಕಚೇರಿ ಆರಂಭಿಸುವ ಮೂಲಕ ತಾಲೂಕಾ ಕೇಂದ್ರಕ್ಕೆ ಮತ್ತೊಂದು ಇಲಾಖೆ ಸೇರ್ಪಡೆಯಾಗಿದೆ. ಈ ನಿಟ್ಟಿನಲ್ಲಿ ತಾಲೂಕಾ ಕೇಂದ್ರದ ಎಲ್ಲ ಇಲಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿ ಹೇಳಿದರು.

ಪಟ್ಟಣದ ಕುಷ್ಟಗಿ ರಸ್ತೆ ಬಳಿ ಬುಧವಾರ ತಾಲೂಕಾ ಉಪ ಖಜಾನೆ ಇಲಾಖೆ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿಯೇ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಗಜೇಂದ್ರಗಡ ತಾಲೂಕಿಗೆ ಬೇಕಾಗುವ ಎಲ್ಲ ಇಲಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಪೂರ್ಣ ಪ್ರಮಾಣದ ತಾಲೂಕಾ ಕೇಂದ್ರವನ್ನಾಗಿ ಮಾಡಲು ಸರ್ಕಾರ ಹಂತ, ಹಂತವಾಗಿ ಅನುದಾನ ಬಿಡುಗಡೆ ಮಾಡುವುದಲ್ಲದೇ, ಇಲಾಖೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದೆ.
ತಾಲೂಕಿನ ಸರ್ಕಾರಿ ಅಧಿಕಾರಿಗಳು ಹಣಕಾಸಿನ ವ್ಯವಹಾರಕ್ಕೆ ರೋಣ ಪಟ್ಟಣಕ್ಕೆ ಅಲೆಯಬೇಕಾಗಿತ್ತು. ಆದರೀಗ ಗಜೇಂದ್ರಗಡದಲ್ಲಿಯೇ ಉಪ ಖಜಾನೆ ಆರಂಭಿಸುವ ಮೂಲಕ ಇಲ್ಲಿಯೇ ಸೌಲಭ್ಯ ಒದಗಿಸಲಾಗಿದೆ. ಆಧುನಿಕ ಬೆಳೆದಂತೆ ತಂತ್ರಜ್ಞಾವು ಕ್ಷೀಪ್ರಗತಿಯಲ್ಲಿ ಸಾಗಿದೆ. ಅದರನ್ವಯ ಖಜಾನೆ ಇಲಾಖೆಯಲ್ಲಿಯೂ ಸಹ ಕಾಗದ ರಹಿತ ವ್ಯವಹಾರ ಮಾಡಲಾಗುತ್ತಿದೆ ಎಂದರು.

ಪ್ರಭಾರಿ ಜಿಲ್ಲಾ ಖಜಾನೆ ಉಪನಿರ್ದೆಶಕ ಸಂದೇಶ ಎಸ್.ಲಾಡ್ ಮಾತನಾಡಿ, ಆರ್ಥಿಕ ಇಲಾಖೆಯು ರಾಜ್ಯ ಹಣಕಾಸಿನ ನಿರ್ವಹಣೆಯ ಕಾರ್ಯಭಾರವನ್ನು ಹೊಂದಿದೆ. ಈ ಕಾರ್ಯದಲ್ಲಿ ಖಜಾನೆ ಇಲಾಖೆಯು ಪ್ರಮುಖ ಪಾತ್ರ ವಹಿಸುತ್ತಿದೆ. ಇದೀಗ ಗಜೇಂದ್ರಗಡ ತಾಲೂಕಾ ಕೇಂದ್ರದಲ್ಲಿ ಉಪ ಖಜಾನೆ (ಟ್ರೆಜರಿ) ಕಚೇರಿ ಪ್ರಾರಂಭಿಸಲಾಗಿದೆ. ಸರ್ಕಾರದ ಹಣಕಾಸಿನ ವ್ಯವಹಾರಕ್ಕೆ ಅನುಕೂಲವಾಗಲಿದೆ ಎಂದರು.

ತಹಶೀಲ್ದಾರ ಎ.ಬಿ. ಕಲಘಟಗಿ, ಪುರಸಭೆ ಅಧ್ಯಕ್ಷ ವೀರಣ್ಣ ಪಟ್ಟಣಶೆಟ್ಟ, ಸಹಾಯಕ ಖಜಾನೆ ಅಧಿಕಾರಿ ಆರ್.ಎನ್. ಜೋಗೇರಿ, ಮುಖ್ಯ ಲೆಕ್ಕಿಗ ಬಸವರಾಜ ನೀಲನಾಯಕ್, ಮುಂಡರಗಿಯ ಸಹಾಯಕ ಖಜಾನೆ ಅಧಿಕಾರಿ ಎ.ಯು. ಬಗಲಿ, ಶಿರಸ್ತೆದಾರ ವೀರಣ್ಣ ಅಡಗತ್ತಿ, ಗಣೇಶ ಕೊಡಕೇರಿ, ಪುರಸಭೆ ಸದಸ್ಯ ರುಪ್ಲೇಶ ರಾಠೋಡ, ಕನಕಪ್ಪ ಅರಳಿಗಿಡದ, ಯಮನಪ್ಪ ತಿರಕೋಜಿ, ಭಾಸ್ಕರ ರಾಯಬಾಗಿ, ಬಿ.ಎಂ. ಸಜ್ಜನರ, ಗುಲಾಂ ಹುನಗುಂದ, ಬಾಳನಗೌಡ ಗೌಡರ ಸೇರಿದಂತೆ ಇನ್ನಿತರರು ಇದ್ದರು.

Exit mobile version