ಡಾ.ಆನಂದ್ ಪಾಟೀಲ್ ಸಂದರ್ಶನ : ಮಧು ಮೇಹ ರಕ್ತದೊತ್ತಡ, ಹೃದಯ ಕಾಯಿಲೆ, ಎಚ್‌ಐವಿ ಇರುವವರು ಕೊರೊನಾ ಬಗ್ಗೆ ವಹಿಸಬೇಕಾದ ಮುಂಜಾಗೃತೆಗಳೇನು?

Doctor Aanand Patil

ಮಧು ಮೇಹ ರಕ್ತದೊತ್ತಡ, ಹೃದಯ ಕಾಯಿಲೆ, ಎಚ್‌ಐವಿ ಇರುವವರು ಕೊರೊನಾ ಬಗ್ಗೆ ವಹಿಸಬೇಕಾದ ಮುಂಜಾಗೃತೆಗಳೇನು?

ಮೇಹ ರಕ್ತದೊತ್ತಡ, ಹೃದಯ ಕಾಯಿಲೆ, ಎಚ್‌ಐವಿ ಇರುವವರು ಕೊರೊನಾ ಬಗ್ಗೆ ವಹಿಸಬೇಕಾದ ಮುಂಜಾಗೃತೆಗಳು ಹಾಗೂ ಕ್ವಾರಂಟೈನ್ ಅವಧಿ ಮುಗಿದ ಮೇಲಿನ ನಮ್ಮ ಜೀವನ ಶೈಲಿ ಹೇಗಿರಬೇಕು. ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ತಜ್ಞ ವೈದ್ಯ ಡಾ.ಆನಂದ್ ಪಾಟೀಲ್(ಮೊ.8073475549) ಇವರೊಂದಿಗೆ ಡಾ. ಬಸವರಾಜ್ ಡಿ ತಳವಾರ (ಮೊ.9148874739) ಅವರು ನಡೆಸಿದ ಸಂದರ್ಶನ ಇಲ್ಲಿದೆ…

ಸಂದರ್ಶಕ: ಕೊರೊನಾ ರೋಗದ ಲಕ್ಷಣಗಳು ಹೇಗಿರುತ್ತವೆ?
ಡಾ.ಆನಂದ್:
ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಾಗ ಮಾತ್ರ ಕೊರೊನಾ ಬರುವ ಸಾಧ್ಯತೆ ಇರುತ್ತದೆ. ಕೊರೊನಾ ನಮ್ಮ ದೇಹದ ಮೇಲೆ ದಾಳಿ ಮಾಡಿದಾಗ ನಮ್ಮ ರಕ್ತದ ಕಣಗಳು ಹೆಪ್ಪುಗಟ್ಟುವಂತೆ ಮಾಡುತ್ತದೆ. ಈ ಮೂಲಕ ದೇಹದ ಪ್ರಮುಖ ಅಂಗಾಂಗಗಳಿಗೆ ರಕ್ತ ಸಂಚಾರ ಕಡಿತಗೊಳಿಸುತ್ತದೆ. ಶ್ವಾಸಕೋಶ, ಹೃದಯ, ಕಿಡ್ನಿ ಬಹು ಅಂಗಾಗಳಿಗೆ ರಕ್ತ ಸಂಚಾರ ಕಡಿತಗೊಳಿಸುವುದರ ಮೂಲಕ ಕೊರೊನಾ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಇದರಿಂದ ಸಾವು ಸಂಭವಿಸುವ ಸಾಧ್ಯತೆಯೂ ಇರುತ್ತದೆ.

ಸಂದರ್ಶಕ: ಕೊರೊನಾ ಲಕ್ಷಣ ಎಷ್ಟು ದಿನಗಳಲ್ಲಿ ಕಂಡು ಬರುತ್ತದೆ?
ಡಾ.ಆನಂದ್:
ಕೊರೊನಾ ಲಕ್ಷಣಗಳನ್ನು ನಾಲ್ಕು ಭಾಗಗಳಾಗಿ ವಿಂಗಡಣೆ ಮಾಡಬಹುದು. ಸೊನ್ನೆಯಿಂದ ಐದು ದಿನಗಳವರೆಗೆ, 6ನೇ ದಿನದಿಂದ 10ನೇ ದಿನದ ವೆರೆಗೆ, 11 ರಿಂದ 15ನೇ ದಿನ ಈ ಅವಧಿಯಲ್ಲಿ ನಮಗೆ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತವೆ. ಹಾಗೂ 16ನೇ ದಿನದಿಂದ 28ನೇ ದಿನದ ವೆರೆಗೆ ಇನ್ನೂ ಹೆಚ್ಚಿನ ರೋಗ ಲಕ್ಷಣಗಳು ನಮ್ಮಲ್ಲಿ ಕಂಡು ಬರುವುದರ ಮೂಲಕ ಅನಾರೋಗ್ಯ ಉಂಟು ಮಾಡುತ್ತದೆ. ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಾಗ ಇನ್ನೂ ಹೆಚ್ಚಿನ ತಿವೃತೆಯಲ್ಲಿ ಕೊರೊನಾ ರೋಗಕ್ಕೆ ತುತ್ತಾಗುತ್ತೇವೆ.

ಸಂದರ್ಶಕ: ಮೊದಲ ಲಕ್ಷಣ ಅಂದರೆ ಸೊನ್ನೆಯಿಂದ 5ದಿನಗಳ ಒಳಗೆ ರೋಗಾಣು ಹೇಗೆ ತನ್ನ ಕೆಲಸ ಮಾಡುತ್ತದೆ?
ಡಾ.ಆನಂದ್: ಕೊರೊನಾ ಕಡಿಮೆ ಅವಧಿಯಲ್ಲಿ ದೇಹಕ್ಕೆ ನಷ್ಟವನ್ನುಂಟು ಮಾಡುವುದಿಲ್ಲ. ಆದರೆ ಕೊರೊನಾ ರೋಗದ ಕಣಗಳನ್ನು ಹೆಚ್ಚು ಮಾಡಿಕೊಳ್ಳುವುದರ ಮೂಲಕ ತನ್ನ ಶಾಶ್ವತ ಜಾಗವನ್ನು ದೇಹದಲ್ಲಿ ಹಡುಕುವ ಹಟದಲ್ಲಿ ಇರುತ್ತದೆ. ಹೀಗಾಗಿ ನಮಗೆ ಯಾವುದೇ ಅನಾರೊಗ್ಯದ ಲಕ್ಷಣಗಳು ಕಂಡು ಬಂದಲ್ಲಿ ಯಾವ ಹಿಂಜರಿಕೆಯೂ ಇಲ್ಲದೆ ಆಸ್ಪತ್ರೆಗೆ ಹೋಗಬೇಕು. ಜೊತೆಗೆ ಕೊರೊನಾ ಪರೀಕ್ಷೆಗೆ ಒಳಪಡಬೇಕು.

ಸಂದರ್ಶಕ: 6ನೇ ದಿನದಿಂದ ಏನೇನು ಲಕ್ಷಣಗಳು ನಮ್ಮಲ್ಲಿ ಕಂಡು ಬರುತ್ತವೆ?
ಡಾ.ಆನಂದ್: ಅನುವಂಶಿಕವಾಗಿ ಪಡೆದಂತಹ ಗುಣಗಳ ಮೇಲೆ ದೇಹದ ರೋಗ ನೀರೋಧಕ ಶಕ್ತಿ ಅವಲಂಭಿತವಾಗಿರುತ್ತದೆ. ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ, ಅವರಿಗೆ ರೋಗ ತಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಹೀಗಾಗಿ ನಾವು ದೇಹದ ಆರೋಗ್ಯವನ್ನು ಉತ್ತಮ ಆಹಾರ ಸೇವನೆ ಮಾಡುವ ಮೂಲಕ ಅದನ್ನು ಹೆಚ್ಚಿಸಿಕೊಳ್ಳಬೇಕು. ಹೀಗಾಗಿ ಆಹಾರ ಮತ್ತು ದೈಹಿಕ ಶ್ರಮ ದೇಹಕ್ಕೆ ಬಹಳ ಮುಖ್ಯ. 15ರಿಂದ 28 ಹಂತದಲ್ಲಿ ಕೊರೊನಾ ಇದ್ದರೆ ಅದರ ನಿಯಂತ್ರಣ ಅಸಾಧ್ಯ. ಅದು ಕೂಡ ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಅವಲಂಭಿತವಾಗಿ ಇರುತ್ತದೆ.

ಸಂದರ್ಶಕ: ಮಧು ಮೇಹ ರಕ್ತದೊತ್ತಡ, ಹಾರ್ಟ್ ಸಮಸ್ಯೆ, ಎಚ್‌ಐವಿ ರೋಗ ಇದ್ದವರು ಕೊರೊನಾ ಬಂದರೆ ಸತ್ತೇ ಹೊಗುತ್ತಾರೆ ಎನ್ನುವಂತ ನಂಬಿಕೆ ಬಹಳಷ್ಟು ಜನರಿಗಿದೆ.
ಡಾ.ಆನಂದ್: ಯಾವುದೇ ಕೆಲಸದಲ್ಲಿ ಹಾಗೂ ರೋಗವನ್ನು ಗೆಲ್ಲಲು ನಾವು ಮಾನಸಿಕವಾಗಿ ಸಿದ್ಧರಾಗಿರಬೇಕು. ಅಂದಾಗ ನಾವು ಅರ್ಧ ಯಸಶ್ಸು ಗಳಿಸಿದ ಹಾಗೆ. ಮತ್ತು ಹೀಗಿದ್ದಾಗ ಮಾತ್ರ ನಾವು ದೈಹಿಕವಾದ ಯಾವುದೇ ಸವಾಲಿಗೂ ಸಿದ್ದರಿರುತ್ತೇವೆ. ಹೀಗಾಗಿ ಕೋರೋನಾ ಬಗ್ಗೆ ಮುಂಜಾಗ್ರತೆ ಬಹಳ ಮುಖ್ಯ. ಹಾಗೂ ಕೊರೊನಾ ಬಂದ ಮೇಲೆ ಆತ್ಮಸ್ಥೆöÊರ್ಯ ಬಹಳ ಮುಖ್ಯ. ಇಂತಹ ಸಾಕಷ್ಟು ರೋಗಿಗಳನ್ನು ನಾವು ನೋಡಿದ್ದೆವೆ. ಅವರು ಗುಣಮುಖರಾಗಿಯೂ ಹೋಗಿದ್ದಾರೆ.

ಸಂದರ್ಶಕ: ಕ್ವಾರೇಂಟೇನ್ ಅವಧಿಯಲ್ಲಿ ಯಾವ ಹೇಗಿರಬೆಕು?
ಡಾ.ಆನಂದ್: ಕ್ವಾರೆಂಟೆನ್‌ನಲ್ಲಿ ಇದ್ದಷ್ಟು ಒಳ್ಳೆಯದು. ಹೀಗಿರುವುದರಿಂದ ರೋಗ ಸಂಪೂರ್ಣವಾಗಿ ಹೋಗುತ್ತೆ ಅಂತ ಅಲ್ಲ. ನಮಗೆ ನಾವೆ ಲಕ್ಷö್ಮಣ ರೇಖೆ ಹಾಕಿಕೊಂಡು ಬದುಕುವ ವ್ಯವಸ್ಥೆ ಮಾಡಿಕೊಳ್ಳಬೇಕು. ನಮಗೆ ಕುಟಂಬ ಇರುವುದರಿಂದ ಕ್ವಾರೆಂಟೈನ್ ಅನಿವಾರ್ಯ. ಇಲ್ಲದೇ ಹೋದಲ್ಲಿ ನಮ್ಮ ಕುಟುಂಬದ ಸದಸ್ಯರಿಗೂ ಹರಡುವ ಸಾಧ್ಯತೆ ಇರುತ್ತದೆ. ಈ ಉದ್ದೇಶದಿಂದ ನಮಗೆ ನಾವು ದಿಗ್ಭಂಧನಕ್ಕೆ ಒಳಪಡುವುದು ಆನಿವಾರ್ಯ. ಇಲ್ಲಿ ಆಹಾರ ಕ್ರಮ ಬಹಳ ಮುಖ್ಯ. ಹೆಚ್ಚಾಗಿ ಸೊಪ್ಪು, ಮೊಳಕೆ ಕಾಳಿನ ಪದಾರ್ಥ ಸೇವಿಸುವುದು ಉತ್ತಮ.

ಸಂದರ್ಶಕ: ರೋಗ ಬರುವುದಿಲ್ಲ ಎನ್ನುವ ಹುಂಬುತನ ನಮ್ಮಲ್ಲಿದೆ ಅದಕ್ಕೆನಂತಿರಿ?
ಡಾ.ಆನಂದ್:
ಕೊರೊನಾ ವಿಷಯದಲ್ಲಿ ನಮ್ಮ ನಿರ್ಲ್ಯಕ್ಷö್ಯ ಬಹಳ ಅಪಾಯಕಾರಿ. ಯಾಕೆಂದರೆ ಇದು ಸರಪಳಿ ವ್ಯವಸ್ಥೆಯಿಂದ ಹರಡುವುದರಿಂದ ನಮ್ಮ ಆರೋಗ್ಯದ ಜೊತೆಗೆ ತಂದೆ, ತಾಯಿ ಕುಟುಂಬ ಸದಸ್ಯರಿಗೂ ಹರಡುವ ಲಕ್ಷಣ ಇದೆ. ಹೀಗಾಗಿ ಸರ್ಕಾರದ ಪ್ರತಿಯೊಂದು ಸಂದೇಶಗಳನ್ನು ಪಾಲನೆ ಮಾಡೊಣ ಸುರಕ್ಷಿತ ಅಂತರದಿAದ ಇರೋಣ.

ಸಂದರ್ಶಕ: ಸಣ್ಣ ಮಕ್ಕಳಿಗೆ ರೋಗ ಹರಡುವುದಿಲ್ಲ ಅಂತಾರಲ್ಲ? ಹೌದೆ? ಡಾ.ಆನಂದ್: ಮಕ್ಕಳಿಗೂ ಹರಡುತ್ತದೆ. ಆದರೆ ಅದರ ತಿವೃತೆ ಕಡಿಮೆ. ಹೀಗಾಗಿ ಅವರ ಆರೋಗ್ಯದ ಬಳಿಯೂ ನಾವು ಗಮನ ಕೊಡಬೇಕು. ಮಾದ್ಯಮಗಳು ಈ ವಾತಾವರಣ ನಿರ್ಮಿಸಿವೆ ಎನ್ನುವ ಆರೋಪವಿದೆ. ಕೋರೊನಾ ಇರುವುದು ಅಂತೂ ಸತ್ಯ. ಹೀಗಾಗಿ ನಾವು ನಮಗೋಸ್ಕರ, ನಮ್ಮವರಿಗೋಸ್ಕರ ಇನ್ನೂ ಕೆಲವೊಂದಿಷ್ಟು ದಿನ ಕೊರೊನಾ ಸೂಚನೆಗಳನ್ನು ಪಾಲಿಸೋಣ. ಆರೋಗ್ಯವಾಗಿ ಇರೋಣ.

Exit mobile version