ರಾಜ್ಯದಲ್ಲಿ ಮತ್ತೊಮ್ಮೆ ರೈತರಿಂದ ಬಂದ್ ಕರೆ

karnataka band formers

ರಾಜ್ಯದಲ್ಲಿ ಮತ್ತೊಮ್ಮೆ ರೈತರಿಂದ ಬಂದ್ ಕರೆ

ಬೆಂಗಳೂರು: ಡಿ.5 ರಂದಷ್ಟೆ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆ ನೀಡಿದ ಬಂದ್ ಕರೆ ಬೆನ್ನಲ್ಲೆ, ಡಿ.8 ಕ್ಕೆ ರೈತಪರ ಸಂಘಟನೆಗಳು ರಾಜ್ಯ ಬಂದ್ ಕರೆ ನೀಡಿವೆ. ಡಿಸೆಂಬರ್ 8 ರಂದು ಭಾರತ್ ಬಂದ್ ಗೆ ರಾಜ್ಯದ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿದೆ.

ಡಿ.9 ರಂದು ಬಾರುಕೋಲು ಚಳವಳಿ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರೈತ ಸಂಘದ ತಿಳಿಸಿದೆ. ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ನೀತಿ ವಿರೋಧಿಸಿ ಹೋರಾಟ ಕೈಗೊಂಡಿದ್ದು, ಡಿ.8 ರಂದು ರೈತ ಸಂಘಟನೆಯಿಂದ ರಾಜ್ಯದಲ್ಲಿಯೂ ಬಂದ್ ಕರೆ ನೀಡಲಿದ್ದು, ಎಲ್ಲ ಹೆದ್ದಾರಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಬಂದ್ ನಡೆಯಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

Exit mobile version