ಲಕ್ಷ್ಮೇಶ್ವರ: ಅಗಸ್ತ್ಯ ತೀರ್ಥ ಸ್ಥಳ ಅಭಿವೃದ್ಧಿಗೆ ಒತ್ತಾಯ

ಲಕ್ಷ್ಮೇಶ್ವರ: ಪಟ್ಟಣದ ಪುರಾತನ ಪುಣ್ಯ ಕ್ಷೇತ್ರವಾದ ಅಗಸ್ತ್ಯ ತೀರ್ಥದಲ್ಲಿ ಸಪ್ತಮುನಿಗಳಲ್ಲಿ ಒಬ್ಬರಾದ ಅಗಸ್ತ್ಯ ಮುನಿಗಳು ತಪಸ್ಸು ಮಾಡಿರುವ ಪವಿತ್ರ ಸ್ಥಳವನ್ನು ಮುಜುರಾಯಿ ಮತ್ತು ಪ್ರಾಚ್ಛವಸ್ತು ಇಲಾಖೆಗೆ ಸೆರಿಸಬೇಕೆಂದು ವಿಶ್ವ ಹಿಂದೂ ಪರಿಷತ್ತು ಹಾಗೂ ಭಜರಂಗದಳ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

   ಅಗಸ್ತ್ಯ ಮುನಿಗಳಿ ತಪಸ್ಸು ಗೈದ ಅಗಸ್ತ್ಯ ತೀರ್ಥವನ್ನು ಸ್ವಚ್ಛಗೊಳಿಸಿ ಅಲ್ಲಿರುವ ಪುರಾತನ ಹೊಂಡಗಳಾದ ಗಂಗೆ  ಮತ್ತು ಗೌರಿ ಸ್ನಾನ ಮಾಡಿದರೆ ಗಂಗೆಯಲ್ಲಿಯೇ ಸ್ನಾನ ಮಾಡಬೇಕು ಅಂದರೆ ಪುಣ್ಯ ಬರುತ್ತದೆ ಎನ್ನುವ ಪ್ರತೀತ ಇದೆ ಇವುಗಳನ್ನು ಸ್ವಚ್ಛಗೊಳಿಸಲು ವಿವಿಧ ಸಂಘಟನೆಗಳು ಮುಂದೆ ಬಂದಿದ್ದು ಅವರೊಂದಿಗೆ ಇಲಾಖೆಯವರು ಕೈಜೊಡಿಸಬೇಕು ಹಾಗೂ ಪುನರುಜ್ಜೀವನ ಗೊಳಿಸಲು ಮುಜರಾಯಿ ಹಾಗೂ ಪ್ರಾಚ್ಯವಸ್ತು ಇಲಾಖೆಗಳ ಗಮನ ಸೆಳೆಯಬೇಕು ಹಾಗೂ ಇಲ್ಲಿ ಈಗಾಗಲೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದು ಅದನ್ನು ತಡೆಯಲು ಸೂಕ್ತ ಕ್ರಮ ಜೊತೆಗೆ ಸುತ್ತಲೂ ತಂತಿಬೇಲಿಯನ್ನು ನಿರ್ಮಿಸಬೇಕೆಂದು ಮನವಿ ಮಾಡಿಕೊಂಡರು.

   ಈ ಸಂದರ್ಭದಲ್ಲಿ ಸೋಮೇಶ ಜಗದೀಶ ಉಪನಾಳ, ವಿನೋದ ಉಪ್ಪಾರ,ಮೌನೇಶ ಬಡಿಗೇರ, ವಿರೂಪಾಕ್ಷ ಬೆಳವಿಗಿ, ಅಮರೇಶ ಗಾಂಜಿ, ಗಿರೀಶ ನಾಗಸಮುದ್ರ ,ಚಂದ್ರು ಮುಳಗುಂದ, ಮಂಜು ಬೂದಿಹಾಳ, ಮಲಕಾಜಪ್ಪ ಓಂಕಾರಿ, ಸದಾನಂದ ನಂದೆಣ್ಣವರ, ಪ್ರದೀಪ ಮುಳಗುಂದ, ಬಸವರಾಜ ಚಕ್ರಸಾಲಿ, ಮೈಲಾರಪ್ಪ ಹೆಗೆಣ್ಣವರ, ಪ್ರವೀಣ ಆಚಾರಿ ಸೇರಿದಂತೆ ಅನೇಕರು ಇದ್ದರು.

Exit mobile version