ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ನಿಗದಿ: ಎರಡು ಹಂತದಲ್ಲಿ ಚುನಾವಣೆ

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಹಳ್ಳಿ ಫೈಟ್ ಗೆ ದಿನಾಂಕ ಯಾವಾಗ ಎನ್ನುವ ಕುತೂಹಲ ಬಹುತೇಕರಲ್ಲಿತ್ತು. ಆದರೆ ಇಂದು ಕೊನೆಗೂ  ಚುನಾವಣಾ ಆಯೋಗ ಮೂಹುರ್ತ ಫಿಕ್ಸ್ ಮಾಡಿದ್ದು, ಚುನಾವಣೆ ದಿನಾಂಕಕ್ಕೆ ಎದುರು ನೋಡುತ್ತಿದ್ದವರ ಸಂತಸಕ್ಕೆ ಕಾರಣವಾಗಿದೆ

ಡಿಸೆಂಬರ್ ಅಂತ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. 113 ತಾಲ್ಲೂಕುಗಳಲ್ಲಿನ ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದ ಚುನಾವಣೆ ಡಿ. 22ರಂದು ನಡೆಯಲಿದೆ. ಡಿ. 27ರಂದು ಉಳಿದ ತಾಲ್ಲೂಕುಗಳಲ್ಲಿನ ಗ್ರಾಮ ಪಂಚಾಯಿತಿಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 7ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ.

ರಾಜ್ಯದ ಒಟ್ಟು 5,762 ಗ್ರಾಮ ಪಂಚಾಯಿತಿಗಳ 45128 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕೆಲವು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ನ.30 ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ, ಡಿ. 11 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಡಿ. 14 ನಾಮಪತ್ರ ವಾಪಸ್‌ ಪಡೆದುಕೊಳ್ಳಲು ಕೊನೆಯ ದಿನವಾಗಿದೆ. ಡಿ. 30ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

Exit mobile version