ಮೂಲಭೂತ ಸೌಲಭ್ಯ ವಂಚಿತ ಪ್ರವಾಸಿ ಮಂದಿರ

ಲಕ್ಷ್ಮೇಶ್ವರ: ಅತಿಥಿ ಸತ್ಕಾರಕ್ಕಾಗಿ ಪಟ್ಟಣದಲ್ಲಿ ನಿರ್ಮಿಸಿದ್ದ ಪ್ರವಾಸಿ ಮಂದಿರದ ಸಂರಕ್ಷಣೆಗೆ ನಿರ್ಲಕ್ಷ್ಯದಿಂದ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ವಿಶ್ರಾಂತಿಗಾಗಿ ಬಂದೀರಿ ಜೊಕೆ ಪ್ರವಾಸಿಗರೆ ಎನ್ನುವಂತಿದೆ ಗದಗ ಜಿಲ್ಲೆ ಲಕ್ಷ್ಮೆಶ್ವರ ಪಟ್ಟಣದಲ್ಲಿ ಪ್ರವಾಸಿ ಮಂದಿರ.

ಪಟ್ಟಣದಲ್ಲಿ ಪ್ರವಾಸಿ ಮಂದಿರ ನಿರ್ಮಿಸಿ ಬಹಳಷ್ಟು ವರ್ಷಗಳೇ ಗತಿಸಿವೆ. ಈಗಲೂ ಮಂದಿರದ ಕಟ್ಟಡ ಗಟ್ಟಿಮುಟ್ಟಾಗಿದೆ. ಆದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಮ್ಮ ಹಾಗೂ ಶಾಸಕರು ಪಟ್ಟಣದ ಪ್ರವಾಸಿ ಮಂದಿರವನ್ನು ಸಂರಕ್ಷಣೆ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದಾರೆ.

ಪ್ರವಾಸಿ ಮಂದಿರದ ಕಟ್ಟಡ ಸುಣ್ಣ ಬಣ್ಣ ಕಾಣದೆ ಮೂಲ ಸೌಲಭ್ಯಗಳಿಲ್ಲದೆ ಬಿಕೋ ಎನ್ನುತ್ತಿದೆ. ಈ ಕಟ್ಟಡದಲ್ಲಿ ಹೋದರೆ ಸಾಕು ಭೂತದ ಭಂಗಲೆ ಹಾಗೆ ಭಾಸವಾಗುತ್ತದೆ. ಸುಸಜ್ಜಿತ ಪ್ರವಾಸಿ ಮಂದಿರದ ಕಟ್ಟಡ ಕಾಲ ಕಾಲಕ್ಕೆ ದುರಸ್ತಿ ಕಾಣದೆ ಬಿಕೋ ಎನ್ನುತ್ತಿದೇ. ಆದರೆ ಮತ್ತೆ ಅದೆ ಖಾಲಿ ಜಾಗದಲ್ಲಿ ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದ ಇಡೀ ಪ್ರವಾಸಿ ಮಂದಿರದ ಆವರಣ ಹಸಿರು ಕಾಣದೆ ಬಿಕೋ ಎನ್ನುತ್ತಿದೆ.

ಅಕಾರಿಗಳು ಗಮನ ಹರಿಸಬೇಕು

ಸರಿಯಾದ ನಿರ್ವಹಣೆಯಿಲ್ಲದೇ ಅತಿಥಿಗಳು ಪ್ರವಾಸಿ ಮಂದಿರಕ್ಕೆ ಬರಲು ಹಿಂದೆಟು ಹಾಕುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕು. ಜೊತೆಗೆ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ತೋರಬೇಕಿದೆ ಎಂದು ಮಹೇಶ್ ಹೊಗೆಸೊಪ್ಪಿನ್, ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ ಆಗ್ರಹಿಸಿದ್ದಾರೆ.

ಸೌಲಭ್ಯ ವಂಚಿತ ಮಂದಿರ
ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಅತಿಥಿಗಳ ವಿಶ್ರಾಂತಿಗೆ ಭಂಗ ತರುವಂತಿರುವ ಅಸ್ವಚ್ಛತೆ, ಸೊಳ್ಳೆಗಳ ಕಾಟ, ಸಾಕಷ್ಟು ಪಿಠೋಪಕರಣಗಳ ಕೊರತೆ, ಅಡಿಗೆ ತಯಾರಿಸುವ ಕೊಣೆ ಇಲ್ಲ, ಮಳೆಗಾಲದಲ್ಲಿ ಮಳೆ ನೀರಿನಿಂದ ಸೋರುತ್ತಿದೆ, ಇನ್ನೂ ಹಲವಾರು ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿವೆ. ಅವ್ಯವಸ್ಥೆಗಳ ಆಗರವಾಗಿರುವ ಈ ಪ್ರವಾಸಿ ಮಂದಿರಕ್ಕೆ ಪ್ರವಾಸಿಗರು ಬಂದರೆ ಪರದಾಟ ನಿಶ್ಚಿತ ಎನ್ನುವಂತಿದೆ.

Exit mobile version