ಮೇವುಂಡಿ: ಈಜಲು ಹೋದ ಬಾಲಕ ನೀರು ಪಾಲು

mevund swim boy

ಮೇವುಂಡಿ: ಈಜಲು ಹೋದ ಬಾಲಕ ನೀರು ಪಾಲು

ಡಂಬಳ: ಗೆಳೆಯರೊಂದಿಗೆ ಈಜಲು ಹೋದ ಬಾಲಕ ನೀರು ಪಾಲಾದ ಘಟನೆ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ನಡೆದಿದೆ. 14 ವರ್ಷದ ಬಾಲಕ ಚನ್ನವೀರಗೌಡ ಮೃತ ಬಾಲಕ. ಗೆಳೆಯರೊಂದಿಗೆ ಬುಧವಾರ ಈಜಲ ಹೋದಾಗ ಇಲ್ಲಿನ ಹಿರೇಹಳ್ಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಈತನ ಜೊತೆಗೆ ಈಜಲು ಹೋದ ಗೆಳೆಯರು ಗ್ರಾಮದಲ್ಲಿ ಮಾಹಿತಿ ನೀಡಿದ ಹಿನ್ನೆಲೆ ಗ್ರಾಮಸ್ಥರು ಹಾಗು ಮೃತ ಬಾಲಕನ ಕುಟುಂಬಸ್ಥರು ಹಿರೇಹಳ್ಳದ ಬಳಿ ಜಮಾವಣೆಗೊಂಡರು. ಬುಧವಾರ ಬೆಳಿಗ್ಗೆ 11 ಗಂಟೆಯಿಂದಲೇ ಮೃತ ದೇಹ ಪತ್ತೆಗಾಗಿ ಶೋಧ ಕಾರ್ಯ ನಡೆದಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಮೀನುಗಾರರು ಹಾಗು ಸ್ಥಳೀಯರ ಸಹಕಾರದಿಂದ ಇಂದು ಮೃತದೇಹ ಹೊರತೆಗೆದರು. ಸ್ಥಳಕ್ಕೆ ಮುಂಡರಗಿ ಪೊಲೀಸ್ ಠಾಣೆಯ ಸಿಪಿಐ ಸುಧೀರ್ ಬೆಂಕಿ ಭೇಟಿ ನೀಡಿದ್ದರು

Exit mobile version