ಆರ್ ಆರ್ ನಗರ, ಶಿರಾದಲ್ಲಿ ಆರಂಭಿಕ ಮುನ್ನಡೆ ಕಾಯ್ದುಕೊಂಡ ಬಿಜೆಪಿ!

ಬೆಂಗಳೂರು : ರಾಜ್ಯದಲ್ಲಿ ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿದ್ದು, ಫಲಿತಾಂಶ ಇಂದು ಹೊರ ಬರುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿವೆ.

ರಾಜರಾಜೇಶ್ವರಿ ನಗರದಲ್ಲಿ ಮೊದಲ ಸುತ್ತಿನ ಅಂತ್ಯಕ್ಕೆ ಮುನಿರತ್ನಗೆ 6,164 ಮತಗಳು ಬಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 2,915 ಮತಗಳು ಬಿದ್ದಿವೆ. ಮುನಿರತ್ನ 3,249 ಮತಗಳ ಮುನ್ನಡೆಯಲ್ಲಿದ್ದಾರೆ. ಜೆಡಿಎಸ್ ಕೃಷ್ಣಮೂರ್ತಿಗೆ 136 ಮತಗಳು ಬಿದ್ದಿದೆ.

ಇಲ್ಲಿ 2,09,828 ಮತಗಳು ಚಲಾವಣೆ ಆಗಿದ್ದವು. ಈ ಪೈಕಿ 412 ಅಂಚೆ ಮತಗಳು ಚಲಾವಣೆ ಆಗಿದ್ದವು. ಶಿರಾದಲ್ಲಿ 2,15,694 ಮತದಾರರು ಇದ್ದು, 1,77,645 ಮತಗಳು ಚಲಾವಣೆ ಆಗಿವೆ. ಈ ಪೈಕಿ 6,821 ಅಂಚೆ ಮತಗಳು ಚಲಾವಣೆ ಆಗಿದ್ದವು.

ತುಮಕೂರಿನಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ 3,224, ಕಾಂಗ್ರೆಸ್ಸಿನ ಟಿ.ಬಿ.ಜಯಚಂದ್ರ 2,429, ಜೆಡಿಎಸ್ ಅಮ್ಮಾಜಮ್ಮಾ1,135 , ಸಿಪಿಎಂ 69, ನೋಟಾಗೆ 37 ಮತಗಳು ಬಿದ್ದಿದೆ. ಶಿರಾದಲ್ಲಿ 1,77,645 ಮತಗಳು ಚಲಾವಣೆ ಆಗಿದ್ದವು. ಈ ಪೈಕಿ 6,821 ಅಂಚೆ ಮತಗಳು ಚಲಾವಣೆ ಆಗಿತ್ತು.

Exit mobile version