ತುಮಕೂರು : ಶಿರಾದಲ್ಲಿ ಮೊದಲ ಬಾರಿಗೆ ಕಮಲ ಅರಳಿದ್ದು, ಇತಿಹಾಸ ನಿರ್ಮಿಸಿದೆ.
ಬಿಜೆಪಿ ರಾಜೇಶ್ ಗೌಡ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರನ್ನು ಸೋಲಿಸಿ, ವಿಧಾನಸಭೆ ಪ್ರಸುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಮೂಲಕ ಬಿಜೆಪಿಯ ದಾಖಲೆಗೆ ಸಾಕ್ಷಿಯಾಗಿದ್ದಾರೆ.
21ನೇ ಸುತ್ತಿನ ಅಂತ್ಯಕ್ಕೆ ರಾಜೇಶ್ ಗೌಡ 10,774 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಬಿಜೆಪಿ ಪರ 66,599 ಮತಗಳು ಬಿದ್ದರೆ ಕಾಂಗ್ರೆಸ್ ಪರ 55,825 ಮತಗಳು ಚಲಾವಣೆಯಾಗಿದೆ. ಜೆಡಿಎಸ್ ಪರ 30,507 ಮತಗಳು ಬಿದ್ದಿವೆ.
ರಾಜೇಶ್‌ಗೌಡ ಅವರು ಆರಂಭದಿಂದಲೂ ಮುನ್ನಡೆಯಲ್ಲಿದ್ದರು. ರಾಜೇಶ್ ಗೌಡ ಅಂತರವನ್ನು ಕಾಯ್ಸುಕೊಂಡ ಪರಿಣಾಮ ಅಂತಿಮವಾಗಿ ಮತಗಳ ಅಂತರದಿಂದ ಜಯಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
2018 ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸತ್ಯನಾರಾಯಣ ಅವರು 74,338 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ 63,973, ಬಿಜೆಪಿ 16,959 ಮತಗಳನ್ನು ಪಡೆದಿತ್ತು.
