ಮೋದಿ, ಬಿಡೆನ್ ಮುಂದೆ ಇರುವ ಸವಾಲುಗಳೇನು?

ನವದೆಹಲಿ : ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಆಯ್ಕೆಯಾಗಿದ್ದಾರೆ. ಹೀಗಾಗಿ ದೇಶದ ಬಹುತೇಕ ರಾಷ್ಟ್ರಗಳು ಸ್ನೇಹ ಸಂಬಂಧದ ಕುರಿತು ಚರ್ಚೆ ನಡೆಸುತ್ತಿವೆ.

ಹೀಗಾಗಿ ಭಾರತ – ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧದ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ರಾಜತಾಂತ್ರಿಕ, ಸಾಮರಿಕ ಹಾಗೂ ವಾಣಿಜ್ಯ ಸಂಬಂಧದ ಕುರಿತು ಚರ್ಚೆಗಳು ನಡೆಯುತ್ತಿವೆ. ಆದರೆ, ದೇಶದ ಮಟ್ಟಿಗೆ ಸಕಾರಾತ್ಮಕ ಅಂಶಗಳು ಕೇಳಿ ಬರುತ್ತಿವೆ.

ಬಿಡೆನ್ ಅವರು ಭಾರತಕ್ಕೆ ಅನುಕೂಲಕರ ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ ಎಂಬ ಭರವಸೆ ಸಿಗುತ್ತಿದೆ. ಭಾರತವನ್ನು ತನ್ನ ಪ್ರಮುಖ ಪಾಲುದಾರ ರಾಷ್ಟ್ರವನ್ನಾಗಿ ಮಾಡಿಕೊಳ್ಳಲು ವಾಣಿಜ್ಯ ಕ್ಷೇತ್ರದಲ್ಲಿ ಬಿಡೆನ್ ಹಲವು ವಿನಾಯ್ತಿಗಳನ್ನು ಘೋಷಿಸಬಹುದು ಎಂಬ ನಿರೀಕ್ಷೆ ಇಡಲಾಗಿದೆ.

ಆಡಳಿತ ಹಾಗೂ ಆಡಳಿತಗಾರರ ನೀತಿ ನಿಯಮಾವಳಿಗಳು ಬದಲಾದಂತೆ ಭಾರತ – ಅಮೆರಿಕ ಸಂಬಂಧಗಳಲ್ಲಿಯೂ ಕೊಂಚ ವ್ಯತ್ಯಾಸಗಳಾಗುತ್ತವೆ. ಪ್ರಧಾನಿ ಮೋದಿ ಹಾಗೂ ಜೋ ಬಿಡೆನ್ ನಡುವೆ ಸ್ನೇಹ ಇರುವುದರಿಂದಾಗಿ ಮತ್ತಷ್ಟು ಸುಧಾರಣೆ ಕಾಣುವ ನಿರೀಕ್ಷೆ ಇದೆ.

ಭಾರತ-ಅಮೆರಿಕ ಪರಸ್ಪರ ಮತ್ತು ಜಾಗತಿಕ ಪಾಲುದಾರ ರಾಷ್ಟ್ರಗಳಾಗಿವೆ. ಅಲ್ಲದೇ ಸದ್ಯದ ಜಾಗತಿಕ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಈ ಎರಡೂ ಬೃಹತ್ ದೇಶಗಳು ಮತ್ತಷ್ಟು ಹತ್ತಿರದಿಂದ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಸಿದೆ.

ಸದ್ಯದ ಸ್ಥಿತಿಯಲ್ಲಿ ಚೀನಾದ ಪ್ರಭಾವ ತಗ್ಗಿಸಲು ಭಾರತ – ಅಮೆರಿಕ ಜಂಟಿಯಾಗಿ ಪ್ರಯತ್ನ ನಡೆಸಬೇಕಿದ್ದು, ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಹಾಗೂ ಜೋ ಬಿಡೆನ್ ಒಟ್ಟಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಭಾವಿಸಲಾಗಿದೆ. ಭಾರತ ಹಾಗೂ ಚೀನಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎಂಬುವುದನ್ನು ಒಪ್ಪಿಕೊಳ್ಳಲು ಸಿದ್ಧವಿರದ

ಟ್ರಂಪ್, ಭಾರತಕ್ಕೆ ತೆರಿಗೆ ವಿನಾಯ್ತಿ ನೀಡಲು ನಿರಾಕರಿಸಿದ್ದರು. ಹೀಗಾಗಿಯೇ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅಧಿಕ ಆಮದು ಸುಂಕ ವಿಧಿಸಿ ಟ್ರಂಪ್ ಗಮನ ಸೆಳೆದಿದ್ದರು. ಆದರೆ, ಬಿಡೆನ್ ಅವರಿಂದಾಗಿ ಹಲವು ವಿನಾಸ್ತಿ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ದಕ್ಷಿಣ ಚೀನಾ ಸಮುದ್ರ ಹಾಗೂ ಇಂಡೋ-ಪೆಸಿಫಿಕ್ ಭಾಗದಲ್ಲಿ ಚೀನಾದ ಪ್ರಭಾವ ತಗ್ಗಿಸಲು ಭಾರತ-ಅಮೆರಿಕ ಜಂಟಿಯಾಗಿ ಸೆಣೆಸಬೇಕಿದೆ. ಇದರ ಭಾಗವಾಗಿಯೇ ಕ್ವಾಡ್ ಸದಸ್ಯ ರಾಷ್ಟ್ರಗಳು ಇದೀಗ ಮತ್ತಷ್ಟು ಹತ್ತಿರಕ್ಕೆ ಬಂದಿದ್ದು, ಚೀನಾವನ್ನು ಜಾಗತಿಕವಾಗಿ ಒಂಟಿಯನ್ನಾಗಿ ಮಾಡುವ ಯೋಜನೆಗೆ ಚಾಲನೆ ನೀಡಲಾಗಿದೆ.

Exit mobile version