ತಾನು ಪ್ರೀತಿಸಿದವನೊಂದಿಗೆ ಮದುವೆ ಆಗುತ್ತೇನೆಂದು ಫ್ಲೆಕ್ಸ್ ಏರಿದ ಅಪ್ರಾಪ್ತ ಬಾಲಕಿ!

ಭೋಪಾಲ್ : ತಾಯಿಯ ಇಚ್ಛೆಗೆ ವಿರುದ್ಧವಾಗಿ ನಾನು ಅದೇ ಹುಡುಗನನ್ನು ವಿವಾಹವಾಗುತ್ತೇನೆ ಎಂದು ಅಪ್ರಾಪ್ತೆ ಫ್ಲೆಕ್ಸ್ ಏರಿರುವ ಘಟನೆ ನಡೆದಿದೆ.

ಮಧ್ಯಪ್ರದೇಶದ ಇಂದೋರ್ ನ ಪರದೇಸಿಪುರದಲ್ಲಿ ಈ ಘಟನೆ ನಡೆದಿದೆ. ಫ್ಲೆಕ್ಸ್ ಏರಿ ಕುಳಿತು ತನ್ನ ಮೊಬೈಲ್ ನೋಡುತ್ತ ನಾನು ಅದೇ ಹುಡುಗನನ್ನು ಮದುವೆಯಾಗುತ್ತೇನೆ ಎಂದು ಯುವತಿ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಾಲಕಿ ಫ್ಲೆಕ್ಸ್ ಮೇಲೆ ಕುಳಿತಿರುವುದನ್ನು ಸ್ಥಳೀಯರು ಗಮನಿಸಿದ ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಆ ನಂತರ ಮನವೊಲಿಸುವ ಪ್ರಯತ್ನ ಮಾಡಲಾಗಿದೆ. ಬಳಿಕ ತನ್ನ ಲವ್ ಸ್ಟೋರಿ ಕುರಿತು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.

ಕೂಡಲೇ ಪೊಲೀಸರು, ಹುಡುಗನಿಗೆ ಕರೆ ಮಾಡಿದ್ದಾರೆ. ಈ ಕುರಿತು ಪರದೇಸಿಪುರದ ಎಸ್‍ ಐ ಅಶೋಕ್ ಪಾಟಿದಾರ್ ಮಾತನಾಡಿ, ತಾನು ಪ್ರೀತಿಸಿದ ಹುಡುಗನ ಜೊತೆಗೆ ವಿವಾಹ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಆಗ ಬಾಲಕಿ ಫ್ಲೆಕ್ಸ್ ಹೋರ್ಡಿಂಗ್ ಬಿಟ್ಟು ಕೆಳಗೆ ಇಳಿದಿದ್ದಾಳೆ.

Exit mobile version