ಹುಡುಗಿ ಫೋನ್ ನಂಬರ್ ಕೊಡಲಿಲ್ಲ ಎಂಬ ಕಾರಣಕ್ಕೆ ಈ ಪಾಪಿ ಮಾಡಿದ್ದೇನು?

ಲಕ್ನೋ : ಬಾಲಕಿ ಫೋನ್ ನಂಬರ ಕೊಡಲಿಲ್ಲ ಎಂಬ ಕಾರಣಕ್ಕೆ ಅಪ್ರಾಪ್ತೆ ಹಾಗೂ ಪೋಷಕರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನ ವಿಜಯನಗರ ಪ್ರದೇಶದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಫೋನ್ ನಂಬರ್ ಕೊಡುವಂತೆ ಅಪ್ರಾಪ್ತೆಯನ್ನು ಈ ಸಂದರ್ಭದಲ್ಲಿ ನಂಬರ್ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆರೋಪಿ ತನ್ನ ಗೆಳೆಯರ ಜೊತೆ ಸೇರಿ ಇಂತಹ ಕೃತ್ಯ ಎಸಗಿದ್ದಾನೆ.

ಬಾಲಕಿ ರಾತ್ರಿ ಹೊತ್ತು ಅಂಗಡಿಗೆ ತೆರಳಿದ್ದಳು. ಈ ಸಂದರ್ಭದಲ್ಲಿ ಆರೋಪಿ ಶರದ್ ಎಂಬ ವ್ಯಕ್ತಿ ದಾರಿಯಲ್ಲಿ ಅಡ್ಡ ಬಂದಿದ್ದಾನೆ. ಆಗ ಮತ್ತೆ ಫೋನ್ ನಂಬರ್ ಕೊಡುವಂತೆ ಪೀಡಿಸಿದ್ದಾನೆ. ಆಗಲೂ ಯುವತಿ ಒಪ್ಪಿಗೆ ಸೂಚಿಸಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ಸಂದರ್ಭದಲ್ಲಿ ನಾನು ಕಿರುಚಿದ್ದೇನೆ. ಕೂಡಲೇ ನನ್ನ ಪೋಷಕರು ಹಾಗೂ ಸಂಬಂಧಿಕರು ಬಂದು ನನ್ನನ್ನು ಕಾಪಾಡಿದರು. ಈ ಸಂದರ್ಭದಲ್ಲಿ ಆರೋಪಿ ಶರದ್ ಕೂಡ ಆತನ ಗೆಳೆಯರನ್ನು ಸ್ಥಳಕ್ಕೆ ಕರೆಸಿಕೊಂಡ. ಆಗ ರೋಹಿತ್, ಪಿಂಕು, ರೀಸವ್ ಹಾಗೂ ಮತ್ತೊಬ್ಬ ಗೆಳೆಯ ಸ್ಥಳಕ್ಕೆ ದೌಡಾಯಿಸಿ ನನ್ನ ಮೇಲೆ ಹಲ್ಲೆ ಮಾಡಿದರು. ಇದನ್ನು ವಿರೋಧಿಸಿದ ನನ್ನ ಪಾಲಕರ ಮೇಲೆಯೂ ಅವರ ಹಲ್ಲೆ ಮಾಡಿದ್ದಾರೆ ಎಂದು ಅಪ್ರಾಪ್ತೆ ಆರೋಪಿಸಿದ್ದಾಳೆ.

ನಮ್ಮ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ನನಗೆ ಹಾಗೂ ತಂದೆಗೆ ಗಾಯಘಳಾಗಿವೆ ಎಂದು ಕೂಡ ಅಪ್ರಾಪ್ತೆ ಆರೋಪಿಸಿದ್ದಾಳೆ.

Exit mobile version