ಶಬರಿಮಲೈ ಯಾತ್ರಾರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ

temple ayyappaswami sabari

ಶಬರಿಮಲೈ ಯಾತ್ರಾರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ

ತಿರುವನಂತಪುರಂ: ಅಯ್ಯಪ್ಪಸ್ವಾಮಿ ದೇಗುಲ ಶಬರಿಮಲೈಗೆ ಹೋಗುವ ಮುನ್ನ ಭಕ್ತಾದಿಗಳಿಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

ಶಬರಿಮಲೈನಲ್ಲಿ ನಡೆಯುವ ಮಂಡಲ-ಮಕರ ಹಾಗೂ ವಿಳಕ್ಕು ವರ್ಷದ ಕಾರ್ಯಕ್ರಮಕ್ಕೆ ತೆರಳುವ ಭಕ್ತಾದಿಗಳ ಆರೋಗ್ಯ ರಕ್ಷಣೆಗಾಗಿ ಹಾಗೂ ಸಾರ್ವಜನಕರ ಗಮನಕ್ಕೆ ಕೇರಳ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಎಲ್ಲಾ ಯತ್ರಾರ್ಥಿಗಳು https://sabarimalaonline.org/ ವೆಬ್ ಸೈಟ್ ನ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು.

ಮಾರ್ಗಸೂಚಿಗಳು

  1. ಶಬರಿಮಲೈಗೆ ಭೇಟಿ ನೀಡುವ 48 ಗಂಟೆ ಅವಧಿಯ ಮೊದಲು ಕೋವಿಡ್-19 ನೆಗೆಟಿವ್ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ.
  2. ಪ್ರವೇಶ ಸ್ಥಳದಲ್ಲಿ Angtigen Test ಅವಕಾಶ ಕಲ್ಪಿಸಲಾಗಿದ್ದು, ಅದರ ವೆಚ್ಚವನ್ನು ಯಾತ್ರಾರ್ಥಿಗಳೇ ಭರಿಸಬೇಕಾಗಿರುತ್ತದೆ.
  3. ಹತ್ತು ವರ್ಷಗಳ ಒಳಪಟ್ಟು ಮತ್ತು 60-65 ವರ್ಷಗಳಿಗೆ ಮೇಲ್ಪಟ್ಟವರಿಗೆ ಹಾಗೂ ಅನಾರೋಗ್ಯದ/ ಕಾಯಿಲೆಯ ಲಕ್ಷಣಗಳು ಇರುವಂತಹವರಿಗೆ ಯಾತ್ರಾ ಪ್ರದೇಶಕ್ಕೆ ಅನುಮತಿ ಇರುವುದಿಲ್ಲ.
  4. ಬಿಪಿಇಲ್ ಕಾರ್ಡ್, ಆಯುಷ್ಮಾನ್ ಕಾರ್ಡ್ ಇತ್ಯಾದಿ ಕಾರ್ಡ್ ಹೊಂದಿರುವವರು ಯಾತ್ರೆಗೆ ತೆರಳುವ ಸಮಯದಲ್ಲಿ ಅದನ್ನು ಹೊಂದಿರಬೇಕು.
  5. ತುಪ್ಪದ ಅಭಿಷೇಕ, ಪಂಪಾ ನದಿ ಸ್ನಾನ, ಸನ್ನಿಧಾನದಲ್ಲಿ ರಾತ್ರಿ ತಂಗುವುದು ಹಾಗೂ ಪಂಪಾ ಮತ್ತು ಗಣಪತಿ ದೇವಸ್ಥಾನ ಅವಕಾಶವಿರುವುದಿಲ್ಲ.
  6. ಯಾತ್ರಾರ್ಥಿಗಳು ಎರುವೆಲು ಮತ್ತು ವೇದಸಾರಿಕ್ಕರ ಮಾರ್ಗದಲ್ಲಿ ಮಾತ್ರ ಪ್ರಯಾಣಿಸಲು ಅವಕಾಶ

ಶಬರಿಮಲೈ ದೇವಾಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ನ.16ರಿಂದ ಆರಂಭವಾಗುವ ಹಬ್ಬದ ದಿನಗಳಲ್ಲಿ ಎಲ್ಲಾ ಭಕ್ತರನ್ನು ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ನಿಯಂತ್ರಿಸಲಾಗುತ್ತದೆ ಎಂದು ತಿರುಬಂಕೂರು ದೇವಸ್ವಂ ಮಂಡಳಿ ತಿಳಿಸಿದೆ.

Exit mobile version