ಗ್ರಾಪಂ ಮಾಜಿ ಅಧ್ಯಕ್ಷನ ದರ್ಪ!: ಮರಳು ಟಿಪ್ಪರ್ ನಿಧಾನವಾಗಿ ಓಡಿಸಿ ಅಂದಿದ್ದಕ್ಕೆ ಹಲ್ಲೆ ಮಾಡಿದ ಆರೋಪ

kokkaragundi president gadag

mahesh meti dourjanya

ಗದಗ: ಹೇಳೋದು ವೇದಾಂತ, ತಿನ್ನೋದು ಬದನೆಕಾಯಿ ಎನ್ನುತ್ತಾರಲ್ಲ, ಆ ರೀತಿಯ ಕಥೆಯಿದು. ಇಲ್ಲೊಬ್ಬ ವ್ಯಕ್ತಿ ಊರಿನ ಮುಖಂಡ. ಪ್ರತಿ ದಿನ ನಾಲ್ಕಾರು ಜನಕ್ಕೆ ಬುದ್ಧಿ ಹೇಳುತ್ತಿದ್ದ. ಸದ್ಯ ಈ ವ್ಯಕ್ತಿಯೇ ಕುಟುಂಬವೊಂದರ ಮೇಲೆ ದರ್ಪ ಮೆರೆದಿದ್ದಾನೆ.

ಅಷ್ಟೇ ಅಲ್ಲದೇ, ಅವರ ಮೇಲೆ ಹಲ್ಲೆ ಮಾಡುವುದರೊಂದಿಗೆ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮಹೇಶ ಮಲ್ಲಪ್ಪ ಮೇಟಿ ಎಂಬ ವ್ಯಕ್ತಿಯೇ ಈ ರೀತಿ ದರ್ಪ ಮೆರೆದ ನಾಯಕ. ಈ ವ್ಯಕ್ತಿ ಲಕ್ಷ್ಮೇಶ್ವರ ತಾಲೂಕಿನ ಕೊಕ್ಕರಗುಂದಿ ಗ್ರಾಮದ ಮಾಜಿ ಗ್ರಾಪಂ ಅಧ್ಯಕ್ಷ ಮಹೇಶ್ ಮೇಟಿ ಎಂದು ಹೇಳಲಾಗುತ್ತಿದೆ. ಈತ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

ಮಹೇಶ್ ಮೇಟಿ, ಮಾಜಿ ಗ್ರಾಪಂ ಅಧ್ಯಕ್ಷ

ಅಕ್ರಮ ಮರಳು ದಂದೆ ಆರೋಪ!

ಟಿಪ್ಪರ್ ನಲ್ಲಿ ಮರಳು ತುಂಬಿಕೊಂಡು ಗ್ರಾಮದ ಮಾರ್ಗವಾಗಿ ಪ್ರತಿ ನಿತ್ಯ ರಾಜಾರೋಷವಾಗಿ ಸಂಚಾರ ಮಾಡುಸಿತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಟಿಪ್ಪರ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮರಳು ತುಂಬಿಕೊಂಡು ಸಾಗಾಟ ಮಾಡುತ್ತಿದ್ದರಿಂದಾಗಿ ರಸ್ತೆಗಳೆಲ್ಲ ಹದಗೆಟ್ಟು ಹೋಗಿವೆ. ಬೇಕಾಬಿಟ್ಟಿಯಾಗಿ ಮನಸೋ ಇಚ್ಛೆ ಟಿಪ್ಪರ್ ಓಡಿಸುತ್ತಿರುವುದರಿಂದಾಗಿ ಈ ಭಾಗದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅಷ್ಟೇ ಅಲ್ಲದೇ ರೈತರ ಪೈಪ್ ಲೈನ್ ಗಳು ಕೂಡ ಹಾಳಾಗಿ ಹೋಗಿವೆ. ಈ ವ್ಯಕ್ತಿಯ ಟಿಪ್ಪರ್ ಸಂಚಾರದಿಂದಾಗಿ ಗ್ರಾಮದ ಫಕ್ಕೀರೇಶ್ ಕಟ್ಟಿಮನಿ ಎಂಬುವವರ ನೀರಿನ ಪೈಪ್ ಹಾಳಾಗಿದೆ. ಹೀಗಾಗಿ ಈ ವ್ಯಕ್ತಿ ನಿಧಾನವಾಗಿ ಸಂಚಾರ ಮಾಡುವಂತೆ ಹೇಳಿದ್ದಾರಂತೆ.

ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದರು ನಮ್ಮ ತಮ್ಮನ ಜೊತೆ ಜಗಳವಾಗುತ್ತಿತ್ತು. ಆಗ ನಾನು ಮೈಕೈ ಮುಟ್ಟಿ ಜಗಳಾಡಬೇಡಿ. ಮಾತಿನ ಮೂಲಕ ಹೇಳಿ ಅಂದಿದ್ದಕ್ಕೆ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದರು. -ರತ್ನವ್ವ. ಹಲ್ಲೆಗೊಳಗಾದ ಮಹಿಳೆ

ಸಮಸ್ಯೆ ಹೇಳಿದ್ರೆ ಆವಾಜ್ ಹಾಕಿದನಂತೆ..!

ಹೀಗೆ ಹೇಳಿದ್ದಕ್ಕೆ ಕೋಪಗೊಂಡ ಮಹೇಶ್, ತನ್ನ ಸಹಚರರನ್ನು ಕರೆದುಕೊಂಡು ಬಂದು ಫಕ್ಕೀರೇಶ್ ಹಾಗೂ ಅವರ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಹಲ್ಲೆಗೊಳಗಾದವರು ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ, ರಸ್ತೆ ನಿಮ್ಮ ಅಪ್ಪಂದಲ್ಲ. ನಾನು ಇಲ್ಲಿಯೇ ಓಡಾಡುತ್ತೇನೆ. ಏನು ಮಾಡುತ್ತೀರೊ ಮಾಡಿಕೊಳ್ಳಿ ಎಂದು ಅವಾಜ್ ಹಾಕಿದ್ದಾನೆ ಎಂದು ಫಕ್ಕೀರೇಶ್ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

ನಾವು ಬದುಕುವುದು ಹೇಗೆ? ನಮ್ಮ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದರೂ ಕೂಡ ಪೊಲೀಸರು ಬೇಗ ದೂರು ದಾಖಲಿಸಿಕೊಳ್ಳಲಿಲ್ಲ. ಈ ರೀತಿಯಾದರೆ ನಾವು ಬದುಕುವುದು ಹೇಗೆ? ಹೀಗೆ ನಿರಂತರವಾಗಿ ಜನಸಾಮಾನ್ಯರ ಮೇಲೆ ಮಹೇಶ್ ಮೇಟಿ ದೌರ್ಜನ್ಯವೆಸಗಿದ್ದಾರೆ. ನಾವು ಬದುಕುವುದಾದರೂ ಹೇಗೆ? -ಪಕ್ಕಿರೇಶ್ ಕಟ್ಟಿಮನಿ, ಹಲ್ಲೆಗೊಳಗಾದ ವ್ಯಕ್ತಿ.

ಮಹೇಶ ಮೇಟಿ, ಶಿವಯೋಗಯ್ಯ, ಸರೋಜವ್ವಾ, ಶಶೀಧರ ಎಂಬ ವ್ಯಕ್ತಿಗಳು ಸೇರಿಕೊಂಡು ಫಕ್ಕೀರೇಶ್ ಕಟ್ಟಿಮನಿ, ಶಕುಂತಲಾ, ರತ್ನವ್ವಾ ಎನ್ನುವವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಗಾಯಾಳುಗಳನ್ನು ಇಲ್ಲಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ದೂರು ದಾಖಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೇಗಾಗಿ ಉತ್ತರಪ್ರಭ ಮಹೇಶ್ ಮೇಟಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಅವರ ಮೊಬೈಲ್ ಸಂಖ್ಯೆ ವ್ಯಾಪ್ತಿ ಪ್ರದೇಶದ ಹೊರಗಿತ್ತು.

ಫಕ್ಕಿರೇಶ್ ಅವರ ಸಹೋದರಿಯ ವಿರುದ್ಧವೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ, ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

Exit mobile version