ಗೆಲ್ಲಲು ಒಂದು ರನ್ ಬೇಕಿದ್ದರೂ ಕೊಹ್ಲಿ ಓಡಿದ್ದು ಎರಡು ರನ್…ಏಕೆ?

ಅಬುಧಾಬಿ: ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಆರ್‌ ಸಿಬಿ ನಾಯಕ ವಿರಾಟ್‌ ಕೊಹ್ಲಿ ಅವರು ಗೆಲ್ಲಲು ಒಂದು ರನ್ ಬೇಕಿದ್ದರೂ 2 ರನ್ ಗಳನ್ನು ಓಡಿದ್ದಕ್ಕೆ ಜನರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಕೆಕೆಆರ್‌ ತಂಡ 20 ಓವರ್‌ ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 84 ರನ್‌ ಗಳಿಸಿತು. ಸುಲಭ ಸವಾಲು ಬೆನ್ನಟ್ಟಿದ ಬೆಂಗಳೂರು ತಂಡ 13.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 85 ರನ್‌ ಗಳಿಸಿತು.

ಆದರೆ, ಗೆಲ್ಲಲು ಕೊನೆಗೆ ಕೇವಲ ಒಂದು ರನ್ ಬೇಕಿತ್ತು. ಆಗ ವಿರಾಟ್‌ ಕೊಹ್ಲಿ ಸ್ಟ್ರೈಕ್‌ನಲ್ಲಿದ್ದರು. ಕೃಷ್ಣ ಎಸೆದ ಬೌಲನ್ನು ಕೊಹ್ಲಿ ಥರ್ಡ್‌ ಮ್ಯಾನ್‌ ಕಡೆಗೆ ತಳ್ಳಿದರು. ಈ ವೇಳೆ ಒಂದು ರನ್‌ ಓಡುವುದರ ಜೊತೆಗೆ ಕೊಹ್ಲಿ ಎರಡು ರನ್‌ ಓಡಿದ್ದಾರೆ. ಆದರೆ ಒಂದು ರನ್‌ ನ್ನು ಮಾತ್ರ ಪರಿಗಣಿಸಲಾಯಿತು.

ಆದರೆ, ಕೊಹ್ಲಿ ಎರಡು ರನ್ ಓಡಿದ್ದಕ್ಕೆ ಜನ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಕೊಹ್ಲಿಗೆ 2 ರನ್‌ ಓಡಿ ಅಭ್ಯಾಸ ಆಗಿರಬೇಕು ಎಂದಿದ್ದಾರೆ. ಇನ್ನು ಕೆಲವರು ಕೊನೆಗೆ 1 ರನ್‌ ಇದ್ದಾಗ ಸಿಕ್ಸ್‌ ಹೊಡೆದರೆ ಅದು ತಂಡದ ಒಟ್ಟು ರನ್‌ ಗೆ ಸೇರ್ಪಡೆಯಾಗುತ್ತದೆ. ಹೀಗಿರುವಾಗ 2 ರನ್‌ ಓಡಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

ಈ 4 ಓವರ್‌ ಬೌಲ್ ಮಾಡಿ 2 ಮೇಡನ್‌ ಮಾಡುವುದರೊಂದಿಗೆ ಕೇವಲ 8 ರನ್ ನೀಡಿ 3 ವಿಕೆಟ್ ಕಿತ್ತ ಮೊಹಮ್ಮದ್‌ ಸಿರಾಜ್‌ ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. 

Exit mobile version