ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡ ಕಿಂಗ್ ಕೊಹ್ಲಿ!

ಅಬುಧಾಬಿ : ಭಾರತ ತಂಡದ ನಾಯಕ ಹಾಗೂ ಆರ್ ಸಿಬಿಯ ಕಿಂಗ್ ಕೊಹ್ಲಿ ಶಾಲಾ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಆರ್ ಸಿಬಿ ಪಂದ್ಯ ಗೆಲ್ಲುವ ಫೆವರಿಟ್ ತಂಡಗಳಲ್ಲಿ ಒಂದಾಗಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಉತ್ತಮ ಫಾರ್ಮ್ ನಲ್ಲಿ ಇದ್ದಾರೆ. ಬೌಲರ್ ಗಳು ಕೂಡ ಮಿಂಚುತ್ತಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಮೂರರಲ್ಲಿ ಸೋತು 14 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡವು ಬೆಂಗಳೂರಿನ ಬೌಲರ್ ಗಳ ಮಾರಕ ಬೌಲಿಂಗ್ ತಬ್ಬಿಬ್ಬಾದರು. ನಿಗದಿತ 20 ಓವರ್ ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು ಕೇವಲ 84 ರನ್ ಗಳಿಗೆ ಆಲ್ ಔಟ್ ಆಯಿತು. ಈ ಸುಲಭದ ಗುರಿ ಬೆನ್ನಟ್ಟಿದ ಆರ್‌ ಸಿಬಿ ತಂಡ ಇನ್ನೂ 6.3 ಓವರ್ ಬಾಕಿ ಇರುವಾಗಲೇ 8 ವಿಕೆಟ್ ಗಳ ಅಂತರದ ಜಯ ಗಳಿಸಿ 14 ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿದೆ. 

ಪಂದ್ಯ ಗೆದ್ದಿರುವ ಖುಷಿಯಲ್ಲಿರುವ ಕೊಹ್ಲಿ ಟ್ವೀಟ್ ಮಾಡಿದ್ದು, ಈ ಫೋಟೋವನ್ನು ನೋಡುತ್ತಿದ್ದರೆ, ನನ್ನ ಶಾಲಾ ದಿನಗಳೇ ನನಗೆ ನೆನಪಿಗೆ ಬರುತ್ತಿವೆ. ನಾಲ್ಕು ಹುಡುಗರು ಒಂದೇ ತರಗತಿಯವರು ಮತ್ತು ಎಬಿ ಮನೆಯಲ್ಲಿಯೇ ಹೋಂ ವಾರ್ಕ್ ಮಾಡಿ ತಯಾರಾಗಿ ಬಂದಿದ್ದಾರೆ. ಇದರ ಜೊತೆಗೆ ಉಳಿದ ಮೂವರು ಹುಡುಗರನ್ನು ತೊಂದರೆಗೆ ಸಿಲುಕಿಸಿದ್ದಾರೆ ಎಂದು ಫನ್ನಿಯಾಗಿ ಬರೆದುಕೊಂಡಿದ್ದಾರೆ.

Exit mobile version