ಸಿದ್ದರಾಮಯ್ಯ ಪರದೇಶಿ ಗಿರಾಕಿ:ಬಿ ಶ್ರೀರಾಮಲು

ಉತ್ತರಪ್ರಭ ಸುದ್ದಿ,

ಗದಗ: 2018 ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ಕೈಯನ್ನು ಕಳೆದು ಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರವೇ ಇಲ್ಲ ಪರದೇಶಿಯಾಗಿ ಅಡ್ಡಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮಲು ಸಿದ್ದು ವಿರುದ್ಧ ಕಿಡಿ ಕಾರಿದರು.

ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013 ರಿಂದ 2018 ಅವರಿಗೆ ಸಿದ್ದು ನೇತೃತ್ವದಲ್ಲಿ ರಾಜ್ಯ ಸರಕಾರವನ್ನು ಆಡಳಿತ ಮಾಡಿದರು. ಸರಕಾರದ ಆಡಳಿತ ನೋಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರು ಸಿಎಂ ಆಗಿದ್ದಾಗಲೇ ಜನರು ಚಾಮುಂಡೇಶ್ವರಿ ಸೋಲಿಸಿದರು. ಮತ್ತೊಂದೆಡೆ ಬಾದಾಮಿಯಲ್ಲಿ ಸ್ಪರ್ದೆ ಮಾಡಿ ಗೆಲುವು ಸಾಧಿಸಿದರು. ಸಿದ್ದರಾಮಯ್ಯ ಅವರಿಗೆ ಕ್ಷೇತ್ರವೇ ಇಲ್ಲ ಪರದೇಶಿಯಾಗಿ ಅಡ್ಡಾಡುತ್ತಿದ್ದಾರೆ. ಪರದೇಶಿಗಳಂತೆ ದಿನಕ್ಕೊಂದು ಊರು ಅಡ್ಡಾಡುತ್ತಿಡುತ್ತಿರುವ ಗಿರಾಕಿ ಎಂದು ವ್ಯಗ್ಯವಾಡಿದ್ದಾರು.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಜನರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ಕೈ ಸಾಮರ್ಥ್ಯ ಕಳೆದುಕೊಂಡು ಬಾದಾಮಿಯಲ್ಲಿ ಗೆಲವು ಸಾಧಿಸಿದರು. ಸಿದ್ದರಾಮಯ್ಯ ಬಾದಾಮಿಗೆ ಬಂದು ಬಿಬಿ ಚಿಮ್ಮನಕಟ್ಟಿಯವರನ್ನ, ಕಾಂಗ್ರೆಸ್ ಪಕ್ಷದ ಎಸ್ ಆರ್ ಪಾಟೀಲ, ಜಿ ಪರಮೇಶ್ವರ ಮುಗಿಸಿ ಈಗೀಗ ಕಾಂಗ್ರೆಸ್ ಮಹಾ ನಾಯಕ ಡಿಕೆ ಶಿವಕುಮಾರ್ ಅವರನ್ನ ಮುಗಿಸಬೇಕೆಂದು ಹೊರಟಿದ್ದಾನೆ ಎಂದರು.

ಬಿ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಲಿ ಎಂಬ ಸಿದ್ದರಾಮಯ್ಯ ಸವಾಲು ವಿಷಯಕ್ಕೆ, ನನ್ನ ಬಗ್ಗೆ ಮಾತ್ನಾಡುವ ಸಿದ್ದರಾಮಯ್ಯ ಕಾಂಗ್ರೆಸ್ ಗಿರಾಕಿನಾ..? ಸಿದ್ದರಾಮಯ್ಯ ಜೆಡಿಎಸ್ ನಲ್ಲಿ ಇದ್ದು ಬಂದವರು. ಕಾಂಗ್ರೆಸ್ ವಿರುದ್ಧ ಕೆಟ್ಟದಾಗಿ ಮಾತ್ನಾಡಿದವರು. ನಂತ್ರ ಕಾಂಗ್ರೆಸ್ ಸೇರಿ ಬ್ಲ್ಯಾಕ್ ಮೇಲ್ ಮಾಡ್ತಾ ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿ ಆದರು. ಈ ಹಿಂದೆ ರಾಮುಲು ಕಾಂಗ್ರೆಸ್ ನಲ್ಲಿದ್ದವರು ಎಂಬ ಸಿದ್ದು ಮಾತಿಗೆ ಪ್ರತಿಕ್ರಿಯೆ ಸಿದ್ದರಾಮಯ್ಯ ಅವರಿಗೆ ಹಿಂದೆ ಏನಾಗಿತ್ತು ಅನ್ನೋ ಬಗ್ಗೆ ಗೊತ್ತಿಲ್ಲ. ಪುರಸಭೆಯಿಂದ ಆಗ ಐವರು ಗೆದ್ದಿದ್ದೆವು.. ಆಗ ಕಾಂಗ್ರೆಸ್ ಟಿಕೆಟ್ ಕೇಳುವವರಿರಲಿಲ್ಲ. ನಂತ್ರ 1999ರಲ್ಲಿ ಸುಷ್ಮಾ ಸ್ವರಾಜ್ ಅವರು ನನ್ನ ಬಳ್ಳಾರಿ ನಗರ ಅಭ್ಯರ್ಥಿ ಮಾಡಿದರು. ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವು ಸೇರಿದಹಾಗೆ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದಾರೆ ಆರ್ ಎಸ್ ಎಸ್ ಗಿರಾಕಿ‌ನಾ ಎಂದಿದ್ದ ಸಿದ್ದರಾಮಯ್ಯಗೆ ಹೇಳಿಕೆಗೆ ರಾಮಲು ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಸೇರಿದಂತೆ ಇತರರು ಇದ್ದರು.

Exit mobile version