ಬೀಜಿಂಗ್ : ಗಡಿಯಲ್ಲಿ ಉದ್ಧಟತನ ಮೆರೆಯುತ್ತಿರುವ ಚೀನಾ, ಯುದ್ಧದ ಉನ್ಮಾದದಲ್ಲಿ ಇದೆಯೇ ಎಂಬ ಸಂಶಯ ಮೂಡುತ್ತಿದೆ.
ಇತ್ತೀಚೆಗಿನ ಅದರ ಅವರ್ತನೆಯೂ ಇದಕ್ಕೆ ಪುಷ್ಠಿ ನೀಡುತ್ತಿದೆ. ಗಡಿಯಲ್ಲಿ ಆ ಹೈಲರ್ಟ್ ಆಗಿ ಇರಬೇಕು ಹಾಗೂ ಯುದ್ಧದ ಸಿದ್ದತೆಯತ್ತ ಗಮನ ಹರಿಸಬೇಕು ಎಂದು ಚೀನಾ ರಾಷ್ಟ್ರದ ಅಧ್ಯಕ್ಷ ಕ್ಸಿ – ಜಿನ್ ಪಿಂಗ್ ಸೇನೆಗೆ ಹೇಳಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಚೀನಾ ಯುದ್ಧದ ರಣ ತಂತ್ರ ಹೆಣೆಯುತ್ತಿರಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಕಾರ್ಪ್ಸ್ ಕಮಾಂಡರ್ಸ್ ಜೊತೆಗಿನ ಸಂವಾದದ ಸಂದರ್ಭದಲ್ಲಿ ಕ್ಸಿ- ಜಿನ್ ಪಿಂಗ್ ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ವಾಸ್ತವಿಕ ಯುದ್ಧ ತರಬೇತಿಯತ್ತ ಗಮನ ಹರಿಸಬೇಕು. ಯುದ್ಧ ಸಿದ್ಧಾಂತಗಳು, ತರಬೇತಿ ವಿಧಾನಗಳು ಮತ್ತು ಕಾರ್ಯ ಯೋಜನೆಗಳ ವಿಷಯದಲ್ಲಿ ಹೊಸತನದತ್ತ ಮುಖಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಹಲವು ದಿನಗಳಿಂದ ಚೀನಾದಿಂದ ಗಡಿಯಲ್ಲಿ ಭಾರತಕ್ಕೆ ಹಲವು ರೀತಿಯ ತೊಂದರೆಗಳು ಆಗುತ್ತಿವೆ. ಈ ನಿಟ್ಟಿನಲ್ಲಿಯೇ ಭಾರತದೊಂದಿಗೆ ಯುದ್ಧ ಸಾರುವ ನಿಟ್ಟಿನಲ್ಲಿ ಅವರು, ಈ ರೀತಿಯ ಹೇಳಿಕೆ ನೀಡಿದ್ದಾರೆಯೇ ಎಂಬುವುದು ಮಾತ್ರ ಇದುವರೆಗೂ ಸ್ಪಷ್ಟವಾಗಿಲ್ಲ. ಚೀನಾದ ಯುದ್ಧ ತಂತ್ರ ಏನೇ ಇರಲಿ, ಭಾರತವು ಇದಕ್ಕೆ ಸಿದ್ಧವಾಗಿ ನಿಂತಿದೆ. ಚೀನಾ ಸೇರಿದಂತೆ ಪಾಕ್ ಎರಡೂ ರಾಷ್ಟ್ರಗಳು ಒಟ್ಟಿಗೆ ಬಂದರೂ ನಾವು ಎದುರಿಸಲು ಸಿದ್ಧ ಎಂದು ಭಾರತೀಯ ಸೈನಿಕರು ಹೇಳುತ್ತಿದ್ದಾರೆ.
