ಕೋಲ್ಕತ್ತಾ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿದ ದಿನೇಶ್ ಕಾರ್ತಿಕ್!

ಅಬುಧಾಬಿ : ಕೋಲ್ಕತ್ತಾ ತಂಡದ ನಾಯಕತ್ವ ಸ್ಥಾನದಿಂದ ದಿನೇಶ್ ಕಾರ್ತಿಕ್ ಹಿಂದೆ ಸರಿದಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್ ನ ಪ್ರಾರಂಭದಿಂದ ತಂಡವನ್ನು ಮುನ್ನಡೆಸಿರುವ ಕಾರ್ತಿಕ್, ಮಧ್ಯಂತರ ಅವಧಿಯಲ್ಲಿ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡದ ನಾಯಕರಾಗಿರುವ ಇಯಾನ್ ಮಾರ್ಗನ್ ಇನ್ನು ಮುಂದೆ ಕೋಲ್ಕತ್ತಾ ತಂಡವನ್ನು ಮುನ್ನಡೆಸಲಿದ್ದಾರೆ.

ನಾಯಕನಾಗಿ ತಂಡ ಮುನ್ನಡೆಸುವಲ್ಲಿ ಕಾರ್ತಿಕ್ ಎಡವಿದ್ದರು. ತಂಡಕ್ಕೆ ಬೇಕಾದಾಗ ಬ್ಯಾಟ್ ಬೀಸುವಲ್ಲಿ ವಿಫಲರಾಗಿದ್ದರು. ಈ ಕಾರಣದಿಂದ ಮಾರ್ಗನ್ ಅವರಿಗೆ ನಾಯಕ್ವವನ್ನು ಬಿಟ್ಟುಕೊಡುವಂತೆ ಕೆಕೆಆರ್ ಅಭಿಮಾನಿಗಳು ಒತ್ತಾಯಿಸಿದ್ದರು. ಆದ್ದರಿಂದ ನಾಯಕ್ವ ಬಿಟ್ಟುಕೊಟ್ಟು ಬ್ಯಾಟಿಂಗ್ ಕಡೆ ಹೆಚ್ಚು ಗಮನ ನೀಡಲು ಕಾರ್ತಿಕ್ ತೀರ್ಮಾನ ಮಾಡಿದ್ದಾರೆ.

ಇಂದು ಮುಂಬಯಿ ತಂಡವನ್ನು ಎದರಿಸಲಿರುವ ಕೆಕೆಆರ್ ತಂಡದ ನಾಯಕತ್ವವನ್ನು ಮಾರ್ಗನ್ ವಹಿಸಲಿದ್ದಾರೆ. ದಿನೇಶ್, 2018ರಿಂದ ತಂಡದ ನಾಯಕರಾಗಿದ್ದರು. ಸುಮಾರು 37 ಪಂದ್ಯಗಳಲ್ಲಿ ಕೋಲ್ಕತ್ತಾ ತಂಡ ಮುನ್ನಡೆಸಿದ್ದರು. ಅಲ್ಲದೇ, ಈ ಬಾರಿಯ ಐಪಿಎಲ್ ನಲ್ಲಿ ಏಳು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಈ ಪೈಕಿ ನಾಲ್ಕರಲ್ಲಿ ತಂಡ ಜಯ ಗಳಿಸಿದೆ. ನಾಲ್ಕರಲ್ಲಿ ಗೆದ್ದು, ಮೂರು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

Exit mobile version