ಕೆ.ಎಲ್. ರಾಹುಲ್ ಆರೆಂಜ್ ಕ್ಯಾಪ್ ಗಾಗಿ ಆಡುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಅಭಿಮಾನಿಗಳು!

ದುಬೈ : ಬ್ಯಾಟಿಂಗ್ ನಲ್ಲಿ ಅಬ್ಬರಿಸಿದರೂ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾಗುತ್ತಿರುವ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ ವಿರುದ್ಧ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಶನಿವಾರ (ಅ.10)ರಂದು ಕೆಕೆಆರ್ ತಂಡದ ವಿರುದ್ಧ ರೋಚಕ ಸೋಲು ಕಂಡಿದೆ. ಈ ಪಂದ್ಯದಲ್ಲಿಯೂ ನಾಯಕ ರಾಹುಲ್ ಉತ್ತಮವಾಗಿ ಆಡಿದರೂ ತಂಡ ಸೋಲು ಕಂಡಿದೆ. ಸಂಪೂರ್ಣವಾಗಿ ಪಂಜಾಬ್ ನ ಹಿಡಿತದಲ್ಲಿದ್ದ ಪಂದ್ಯವನ್ನೇ ಆಟಗಾರರು  ಕೈ ಬಿಟ್ಟಿದ್ದಾರೆ. ಹೀಗಾಗಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಆದರೆ, ರಾಹುಲ್ ಆರಂಭದಿಂದ ಔಟ್ ಆಗುವವರೆಗೂ ನಿಧಾನಗತಿಯ ಬ್ಯಾಟಿಂಗ್ ಗೆ ಮುಂದಾಗಿದ್ದು, ಅಭಿಮಾನಿಗಳ ಹೆಚ್ಚಿನ  ಆಕ್ರೋಶಕ್ಕೆ ಕಾರಣವಾಗಿದೆ. ರಾಹುಲ್ 58 ಎಸೆತಗಳಿಗೆ 74 ರನ್‌ ಮಾಡಿದ್ದಾರೆ. ಹೀಗಾಗಿ ರಾಹುಲ್ ಪಂದ್ಯ ಗೆಲ್ಲಿಸಲು ಆಡುತ್ತಿಲ್ಲ. ಅವರು ಆರೆಂಜ್ ಕ್ಯಾಪ್ ಗಾಗಿ ಆಡುತ್ತಿದ್ದಾರೆ. ವೈಯಕ್ತಿಕ ರನ್ ಗಳನ್ನು ಹೆಚ್ಚಿಸುವಲ್ಲಿಯೇ ಅವರು ಗಮನ ಕೇಂದ್ರೀಕರಿಸುತ್ತಿದ್ದಾರೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

ಈ ಸೋಲಿನೊಂದಿಗೆ ಪ್ರೀತಿ ಝಿಂಟಾ ಅವರ ಹುಡುಗರು 6ನೇ ಸೋಲನ್ನು ಕಾಣುವಂತಾಗಿದೆ. ಕೊನೆಯ ಕ್ಷಣದಲ್ಲಿ ಅದರದಲ್ಲಿಯೂ ಕೊನೆಯ ಎರಡು ಓವರ್ ನಲ್ಲಿ ಪಂದ್ಯ ಕೈ ಬಿಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಿರುವ ಅಭಿಮಾನಿಗಳು, ಕೆ.ಎಲ್ ರಾಹುಲ್ ಅವರನ್ನೇ ಟಾರ್ಗೆಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಪ್ರದರ್ಶಿಸುತ್ತಿದ್ದಾರೆ.

Exit mobile version