ಲಕ್ಷ್ಮೇಶ್ವರ ಪೊಲೀಸರ ಕಾರ್ಯಾಚರಣೆ: ಕುರಿ, ಮೇಕೆ ಕಳ್ಳರು ಅಂದರ್..!

laxmeshwar police roberry

ಲಕ್ಷ್ಮೇಶ್ವರ ಪೊಲೀಸರ ಕಾರ್ಯಾಚರಣೆ: ಕುರಿ, ಮೇಕೆ ಕಳ್ಳರು ಅಂದರ್..!

ಲಕ್ಷ್ಮೇಶ್ವರ: ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮೇಕೆ ಹಾಗೂ ಕುರಿ ಕಳ್ಳತನ ಪ್ರಕರಣಗಳು ಕಂಡು ಬಂದಿದ್ದವು.  ಘಟನೆ ಗ್ರಾಮೀಣ ಭಾಗದ ಜನರ ನಿದ್ದೆಗೆಡಿಸಿತ್ತು. ಆದರೆ ಕೊನೆಗೂ ಕಳ್ಳರನ್ನು ಸೆರೆ ಹಿಡಿಯುವಲ್ಲಿ ಲಕ್ಷ್ಮೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳ್ಳರ ತಂಡ ಕದ್ದ ಕುರಿ ಹಾಗೂ ಮೇಕೆಗಳನ್ನು ಬೊಲೇರೋ ವಾಹನಗಳಲ್ಲಿ ಸಾಗಿಸಿ ಮಾರುತ್ತಿದ್ದರು. ಕಳ್ಳರು ಕುರಿಗಳನ್ನು ರಾಮಗೇರಿ ಗ್ರಾಮದ ಸಮೀಪ ಬೊಲೇರೋ ವಾಹನದಲ್ಲಿ ಸಾಗಿಸುತ್ತಿದ್ದಾಗ ಅನುಮಾನದ ಮೇಲೆ ಪೋಲಿಸರು ವಾಹನ ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಬೊಲೇರೋ ವಾಹನದಲ್ಲಿ ಸಾಗಿಸುತ್ತಿದ್ದ ಕುರಿಗಳನ್ನು ಹಿಡಿದು ಠಾಣೆಗೆ ಹಾಜರು ಪಡಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಪ್ಪ ತೊಲೆಪ್ಪ ಕುಂಚಿಕೊರವರ, ರವಿ ರಾಮಪ್ಪ ಮೋಡಿಕೇರ್, ಶಂಕರ್ ರಮೇಶ್ ಮೋಡಿಕೇರ್, ಸಂಜೀವ್ ಮಲ್ಲೇಶಪ್ಪ ಚವ್ಹಾಣ್ ಇವರನ್ನು ಲಕ್ಷ್ಮೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ರೋಪಿಗಳು ಲಕ್ಷ್ಮೇಶ್ವರ, ಶಿರಹಟ್ಟಿ, ರೋಣ ತಾಲೂಕಿನ ಸವಡಿ ಗ್ರಾಮ ಹಾಗೂ ಬಾಗಲಕೋಟ ಜಿಲ್ಲೆ ಅಮರಾವತಿ ಗ್ರಾಮದಲ್ಲಿ ಕುರಿ ಮತ್ತು ಆಡು ಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಿಪಿಐಗಳಾದ ವಿಕಾಸ್ ಲಮಾಣಿ, ರವಿ ಕಪ್ಪತ್ತನವರ, ಪಿ.ಎಸ್.ಐ.ಶಿವಯೋಗಿ ಲೋಹಾರ, ಪಿಎಸ್ಐಗಳಾದ ಪಿ.ಎಮ್.ಬಡಿಗೇರ, ಸುನೀಲ್ ನಾಯಕ್, ಎಮ್.ಎಸ್.ಹೊಸಳ್ಳಿ, ಎನ್.ಬಿ.ವಡ್ಡಟ್ಟಿ, ಪಿ.ಎಮ್.ರಂಗ್ರೇಜಿ, ನದಾಫ್, ಗಣೇಶ್ ಗ್ರಾಮಪುರೋಹಿತ್, ಆರ್.ಎಸ್.ಯರಗಟ್ಟಿ, ವಿ.ಡಿ.ಕೊಣ್ಣೂರ್, ಎನ್,ಡಿ.ಹುಬ್ಬಳ್ಳಿ, ಗುರುರಾಜ್ ಎಂ ಬೂದಿಹಾಳ್, ಆನಂದ್ ಸಿಂಗ್ ದೊಡ್ಡಮನಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ಪೊಲೀಸ್ ವರೀಷ್ಟಾಧಿಕಾರಿ ಹಾಗೂ ಉಪ ಪೊಲೀಸ್ ವರೀಷ್ಟಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಸಿಬ್ಬಂಧಿಗಳ  ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Exit mobile version